ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಅನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು ಮಂಡನೆ ಮಾಡಿದ್ದಾರೆ.
ಒಟ್ಟುವ 2, 18, 488 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡನೆಯಾಗಿದೆ.
ಕಂದಾಯ ಇಲಾಖೆಗೆ 7,180 ಕೋಟಿ ರೂ ಅನುದಾನ ನೀಡಲಾಗಿದೆ. ಅಂತೆಯೇ ಲೋಕೋಪಯೋಗಿ ಇಲಾಖೆಗೆ ಶೇ 4ರಂತೆ 10,200 ಕೋಟಿ ರೂ, ಪ್ರಾಥಮಿಕ ಶಿಕ್ಷಣ ಇಲಾಖೆಗೆ 150 ಕೋಟಿ ರೂಪಾಯಿ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ ಶೇ 11ರಷ್ಟು ಅಂದರೆ 26,581 ಕೋಟಿ ರೂ ಅನುದಾನ ನೀಡಲಾಗಿದೆ.
ಜಲ ಸಂಪನ್ಮೂಲ ಇಲಾಖೆಗೆ 18,142 ಕೋಟಿ ರೂ ಅನುದಾನ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ 7642 ಕೋಟಿ ರೂ. ಹಣ ಮೀಸಲಿಡಲಾಗಿದೆ. ಇದಲ್ಲದೆ ಜಲಸಂಪನ್ಮೂಲ ಇಲಾಖೆಗೆ 18,142 ಕೋಟಿ ರೂ, ನಗರಾಭಿವೃದ್ಧಿ – 17,727 ಕೋಟಿ ರೂ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ – 14,449 ಕೋಟಿ ರೂ. ಹಣ ಮೀಸಲಿಡಲಾಗಿದೆ.
ಅಂತೆಯೇ ವಿದ್ಯುತ್ – 14,123 ಕೋಟಿ ರೂ, ಸಮಾಜ ಕಲ್ಯಾಣ – 11,788 ಕೋಟಿ ರೂ, ಲೋಕೋಪಯೋಗಿ – 10,200 ಕೋಟಿ ರೂ, ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ – 7,953 ಕೋಟಿ ರೂ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ -9,317 ಕೋಟಿ ರೂ, ಕೃಷಿ ಮತ್ತು ತೋಟಗಾರಿಕೆ – 7,642 ಕೋಟಿ ರೂ, ಕಂದಾಯ – 7,180 ಕೋಟಿ ರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ – 5,725 ಕೋಟಿ ರೂ ಮತ್ತು ವಸತಿ – 3,942 ಕೋಟಿ ರೂ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ 3,866 ಕೋಟಿ ರೂ, ಇತರೆ ಇಲಾಖೆಗಳಿಗೆ 82,196 ಕೋಟಿ ರೂ. ಮೀಸಲಿಡಲಾಗಿದೆ.