ರಜೆ ಸಿಗದ ಡಿವೈಎಸ್ ಪಿಯಿಂದ ಡಿಜಿಐಜಿಪಿಗೆ ಪತ್ರ…! ಗಣಪತಿ ಬಗ್ಗೆಯೂ ಉಲ್ಲೇಖಿಸಿದ ಡಿವೈಎಸ್ ಪಿ

Date:

ಒಂದು‌ ದಿನ ರಜೆ ಸಿಗದ ಹಿನ್ನೆಲೆಯಲ್ಲಿ ಡಿವೈಎಸ್ ಪಿ ಯೊಬ್ಬರು ಡಿಜಿಐಜಿಪಿಗೆ ಪತ್ರಬರೆದು ಅಳಲು ತೋಡಿಕೊಂಡಿದ್ದಾರೆ.
ಡಿಜಿಐಜಿಪಿ ನೀಲಮಣಿ ಅವರಿಗೆ ಡಿವೈಎಸ್ ಪಿ ಬರೆದ ಪತ್ರದಲ್ಲಿ ಮೃತ ಡಿವೈಎಸ್ ಪಿ ಎಂ ಕೆ ಗಣಪತಿ, ಕಲ್ಪಪ್ಪ ಹಂಡಿಬಾಗ್ ಅವರ ವಿಚಾರ ಸಹ ಪ್ರಸ್ತಾಪಿಸಿದ್ದಾರೆ.


ಪತ್ರಬರೆದಿರೋ ಡಿವೈಎಸ್ ಪಿ ಮಗಳಿಗೆ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮಗಳನ್ನು ತರಬೇತಿ ಕ್ಯಾಂಪ್ ಗೆ ಬಿಟ್ಟು ಬರಲುಬ1 ದಿನದ ರಜೆಗಾಗಿ 9 ದಿನ ಮೊದಲೇ ರಜೆ ಅರ್ಜಿ ಸಲ್ಲಿಸಿದ್ದರು. ರಜೆ ದೊರಕದ ಹಿನ್ನೆಲೆಯಲ್ಲಿ ಮೌಖಿಕವಾಗಿ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಹೋಗಿದ್ದರು. ಆದರೆ, ಇದನ್ನು ಅಶಿಸ್ತೆಂದು ಪರಿಗಣಿಸಿ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು.
23 ದಿನಗಳ ತರಬೇತಿಯಲ್ಲಿ ಕೇವಲ 1 ದಿನ ಮಾತ್ರ ರಜೆ ಹಾಕಿದ್ದೇನೆ. ಆದರೆ ಮತ್ತೊಬ್ಬ ಅಧಿಕಾರಿ ಅರ್ಜಿ ಸಹ ನೀಡದೆ ರಜೆ ಮೇಲೆ ಹೋಗಿದ್ರು, ಅವರು ಹಿರಿಯ ಅಧಿಕಾರಿ/ಸಲಹೆಗಾರರ ವೈಯಕ್ತಿಕ ಕೆಲಸಕ್ಕೆ ಹೋಗಿದ್ದರು. ಅಲ್ಲದೇ ಇನ್ನೂ ಕೆಲವರಿಗೆ 3-4 ದಿನ ಹೊರಗಡೆ ಹೋಗಲು ಅನುಮತಿ ನೀಡಲಾಗಿತ್ತು. ಆದರೆ ನನಗೆ 1 ದಿನವೂ ರಜೆ ಸಿಕ್ಕಿಲ್ಲ. ಇಲಾಖೆಯ ಈ ತಾರತಮ್ಯ ನೀತಿ ಪ್ರಶ್ನಿಸಿ ಡಿಜಿ ಐಜಿಪಿ ನೀಲಮಣಿ ಎನ್ ರಾಜುರವರರಿಗೆ ಪತ್ರ ಬರೆಯುವ ಮೂಲಕ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.


ಎಂ ಕೆ ಗಣಪತಿ ಮತ್ತು ಕಲ್ಲಪ್ಪ ಹಂಡಿಭಾಗ್ ಅವರ ವಿಚಾರವನ್ನು ಪತ್ರದಲ್ಲಿ ಪ್ರಸ್ತಾಪಿಸಿ,
ಸೆಪ್ಟೆಂಬರ್ 7ರಂದು ಎಂ.ಕೆ. ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು, ಆದರೆ ಸೆಪ್ಟೆಂಬರ್ 8ರಂದು ಗಣಪತಿ ವಿರುದ್ಧದ ಆರೋಪಕ್ಕೆ ಕ್ಲೀನ್ ಚಿಟ್‍ನ್ನು ಇಲಾಖೆ ನೀಡಿತ್ತು. ಒಂದು ದಿನ ಮುಂಚಿತವಾಗಿ ಕ್ಲೀನ್ ಚಿಟ್ ನೀಡಿದ್ದರೆ ಗಣಪತಿಯವರು ಬದುಕಿರುತ್ತಿದ್ದರು. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಎರಡು ವರ್ಷ ವಾಯ್ತು. ಅಲ್ಲದೇ ಕಲ್ಲಪ್ಪ ಹಂಡಿಬಾಗ್ ಪ್ರಕರಣದಲ್ಲೂ ಇಲಾಖೆ ಪ್ರಾಮಾಣಿಕ ತನಿಖೆ ನಡೆಸಲಿಲ್ಲ. ಇಲಾಖೆಯಲ್ಲಿನ ಕಿರುಕುಳದಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...