ಸೋಶಿಯಲ್ ಮೀಡಿಯಾದಲ್ಲಿ ಹೊಸಬರನ್ನು ಪರಿಚಯ ಮಾಡಿಕೊಂಡು ಸಲುಗೆ ಬೆಳೆಸಿಕೊಳ್ಳುವ ಮುನ್ನ ಎಚ್ಚರ ಎಚ್ಚರ ಎಚ್ಚರ…!
ಫೇಸ್ ಬುಕ್ ನಲ್ಲಿ ಪರಿಚಯವಾದ ಯುವಕನೊಬ್ಬ ಪ್ರೀತಿಸುವ ನಾಟಕವಾಡಿ ಯುವತಿಗೆ ಮೋಸ ಮಾಡಿರುವ ಘಟನೆ ನಡೆದಿದ್ದು, ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶದ ಕರ್ನೂಲಿ ನಿವಾಸಿ ನರೇಶ್ ವಂಚಕ.
ಈತ ಫೇಸ್ ಬುಕ್ ನಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಪ್ರೀತಿಸುವ ನಾಟಕವಾಗಿ, ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬಳಸಿದ್ದಾನೆ ಎನ್ನಲಾಗಿದೆ.
ಒಂದು ದಿನ ನಾವು ಜೆಪಿ ಪಾರ್ಕ್ ನಲ್ಲಿ ಭೇಟಿಯಾದ್ವಿ . ಆಗಲೇ ನರೇಶ್ ನನ್ನ ಮದ್ವೆ ಆಗೋದಾಗಿ ನಂಬಿಸಿದ. ಬಳಿಕ ಮೈಸೂರು, ವಿಜಯವಾಡ, ವೈಸಾಕ್, ಅನಂತಪುರ ಮೊದಲಾದ ಕಡೆ ಕರೆದುಕೊಂಡು ಹೋಗಿ ನನ್ ಜೊತೆ ಸುತ್ತಾಡಿದ್ದಾನೆ. ಲಾಡ್ಜ್ ಮಾಡಿ ನನ್ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಷ್ಟೇ ಅಲ್ಲದೆ ಕರ್ನೂಲಿನ ತನ್ನ ಮನೆಗೆ ಕರ್ಕೊಂಡು ಹೋಗಿ ಅವನ ಪೋಷಕರಿಗೆ ಪರಿಚಯಿಸಿದ್ದ.
ಈಗ ಆತನ ಪೋಷಕರು ಅವನಿಗೆ ಬೇರೆ ಮದ್ವೆ ಮಾಡಲು ಮುಂದಾಗಿದ್ದಾರೆ ಎಂದು ಯುವತಿ ಯಶವಂತಪುರ ಠಾಣೆಯಲ್ಲಿ ದೂರು ನೀಡಿದ್ದಾಳೆ. ಆರೋಪಿ ನರೇಶ್ ವಿರುದ್ಧ ಐಪಿಸಿ ಸೆಕ್ಷನ್ 376, 417 ಹಾಗೂ ಜಾತಿನಿಂದನೆ ಪ್ರಕರಣ ದಾಖಲಾಗಿದೆ.