ವಿಶ್ವದಲ್ಲಿ 5ಜಿ ಸೇವೆ ಆರಂಭಗೊಳ್ಳುವಾಗಲೇ ಭಾರತದಲ್ಲೂ ಈ ಸೇವೆ ನೀಡಲು ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸಿದ್ಧವಾಗಿದೆ. ದೇಶದಲ್ಲಿ ಇತರೆ ಟೆಲಿಕಾಂವ 5ಜಿ ಸೇವೆಯನ್ನು ಆರಂಭಿಸೋ ಮುನ್ನವೇ ಭಾರತದಲ್ಲಿ 5ಜಿ ಸೇವೆ ಆರಂಭವಾಗಲಿದೆ.
ಭಾರತದಲ್ಲಿ ಬಿಎಸ್ ಎನ್ ಎಲ್ ಗಿಂತ ಮೊದಲು ಯಾರು 5ಜಿ ಸೇವೆ ನೀಡಲು ಸಾಧ್ಯವಿಲ್ಲ ಎಂದು ಬಿಎಸ್ ಎನ್ ಎಲ್ ಪ್ರಧಾನ ವ್ಯವಸ್ಥಾಪಕ ಅನಿಲ್ ಜೈನ್ ಹೇಳಿದ್ದಾರೆ.
ಯಾವಾಗ ಆರಂಭವಾಗಬಹುದು ಎಂಬ ಪ್ರಶ್ನೆಗೆ, ಇನ್ನೂ ಸಮಯ ನಿಗಧಿಯಾಗಿಲ್ಲ. ಜೂನ್ 2020 ರ ವೇಳೆಗೆ 5 ಜಿ ಸೇವೆ ಆರಂಭಗೊಳ್ಳಬಹುದು ಎಂಬ ಮಾತು ಕೇಳಿಬರ್ತಿದೆ. ಈ ಮಧ್ಯೆ ಜೂನ್ 2019ರ ವೇಳೆಗೆ 5ಜಿ ಸೇವೆಗೊಂಡರೂ ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.