ಅಪ್ಪ-ಮಗ ತುಂಗಾಭದ್ರಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ನಡೆದಿದೆ. ತುಂಗಭದ್ರಾ ನದಿ ತೀರದಲ್ಲಿ ಮರಳು ತುಂಬುವ ವೇಳೆ ಏಕಾಏಕಿ ನದಿ ನೀರು ಹೆಚ್ಚಾದ ಪರಿಣಾಮ ಈ ಘಟನೆ ಸಂಭವಿಸಿದೆ.
ಸಿರಗುಪ್ಪದ ರಫೀಕ್ (32) ಹಾಗೂ ಇವರ ಮಗ ಇಸಾಕ್ (7) ನೀರುಪಾಲಾದ ನತದೃಷ್ಟಗಳು.
ಇಂದು ಬೆಳಗಿನ ಜಾವ ಇವರು ಮರಳು ತುಂಬಲು ಎತ್ತಿನ ಬಂಡಿಯಲ್ಲಿ ಬಂದಿದ್ದರು. ಮರಳು ತುಂಬುವಾಗ ನೀರಿನ ಹರಿವು ಹೆಚ್ಚಿದ್ದರಿಂದ ಕೊಚ್ಚಿ ಹೋಗಿದ್ದಾರೆ.
ತುಂಗಾಭದ್ರಾ ನದಿಯಲ್ಲಿ ಕೊಚ್ಚಿ ಹೋದ ಅಪ್ಪ-ಮಗ
Date: