ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ಸುತ್ತ ಹತ್ತಾರು ಅನುಮಾನಗಳು ಹುಟ್ಟಿಕೊಂಡಿವೆ. ಅವರ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು,ಕೀಟನಾಶಕ ಸೇವನೆಯಿಂದ ಶ್ರೀಗಳು ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ.
ಈ ನಡುವೆ ಇವರ ಸಾವಿಗೆ ಹೆಣ್ಣು ಮತ್ತು ಹಣ ಕಾರಣವಾಯಿತೇ? ಎಂಬ ಮತ್ತೊಂದು ಅನುಮಾನ ಮೂಡಿದೆ.
ಪೇಜಾವರ ಮಠದ ಶ್ರೀ ವಿಶ್ಚೇಶ ತೀರ್ಥ ಸ್ವಾಮೀಜಿ ಅವರ ಪ್ರಕಾರ ಶೀರೂರು ಸ್ವಾಮೀಜಿ ಮಹಿಳೆಯೊಬ್ಬರೊಂದಿಗೆ ಸಂಬಂಧ ಹೊಂದಿದ್ದು, ಆಕೆಯ ಜೊತೆ ಸಂಬಂಧ ಇರುವಾಗಲೇ ಇನ್ನೊಬ್ಬ ಮಹಿಳೆಗೆ ಹತ್ತಿರವಾಗಿದ್ದರು. ಇಬ್ಬರು ಮಹಿಳೆಯರ ನಡುವಿನ ವಿವಾದ ಅವರ ಸಾವಿಗೆ ಕಾರಣವಾಗಿರ ಬಹುದಂತೆ. ಅಷ್ಟೇ ಅಲ್ಲದೆ ತನಿಖಾ ಸಂಸ್ಥೆಗಳು ಬಯಸಿದಲ್ಲಿ ತಾನೂ ತನಿಖೆಗೆ ಸಿದ್ಧ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಇನ್ನೊಂದು ಸಂಶಯವೆಂದರೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆಯೂ ಸಾವು ಸಂಭವಿಸಿರಬಹುದು ಎಂದು ಹೇಳಲಾಗ್ತಿದೆ. ಇಬ್ಬರು ಬಿಲ್ಡರ್ ಗಳಿಂದ ಶ್ರೀಗಳು 26 ಕೋಟಿ ವಂಚನೆಗೆ ಒಳಗಾಗಿದ್ದರು ಎಂಬ ಮಾತುಗಳು ಕೇಳಿ ಬರ್ತಿವೆ.
ಸ್ವಾಮೀಜಿ ಗೆ ಇಬ್ಬರು ಬಿಲ್ಡರ್ ಗಳು ಅನೇಕ ಸಮಯದಿಂದ 26 ಕೋಟಿ ಪಾವತಿಸಿರಲಿಲ್ಲ ಎಂಬುದನ್ನು ಶ್ರೀಗಳೇ ದೈವಗಳಿಗೆ ತಿಳಿಸಿದ್ದರು.
ಹೀಗೆ ಹೆಣ್ಣು , ಹಣ ಶ್ರೀಗಳ ಸಾವಿಗೆ ಕಾರಣವಾಯಿತೆಂದು ಹೇಳಲಾಗ್ತಿದೆ.