ಕೀನ್ಯಾದ ಮಾಡೆಲ್ ಒಬ್ಬರಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.
ಬ್ಯೂಟಿ ಕ್ವೀನ್ ರುತ್ ಕಮಾಂಡೆ ಗಲ್ಲು ಶಿಕ್ಷೆಗೆ ಒಳಗಾದ ಚೆಲುವೆ….!
ಈಕೆ ಈ ಶಿಕ್ಷೆಗೆ ಒಳಗಾಗಲು ಕಾರಣ ಪ್ರೀತಿ…!
ಹೌದು, ಪ್ರೀತಿಯಲ್ಲಿ ಭ್ರಮನಿರಸಗೊಂಡ ಈಕೆ 2015ರಲ್ಲಿ ತನ್ನ ಪ್ರಿಯಕರನನ್ನು ಬರೋಬ್ಬರಿ 25 ಬಾರಿ ಚಾಕುವಿನಿಂದ ಹಿರಿದು ಕೊಂದಿದ್ದಳು.
ಪ್ರಕರಣ ಮುಚ್ಚಿ ಹಾಕಲು ಪ್ರಿಯಕರನ ಮೊಬೈಲ್ ತೆಗೆದುಕೊಂಡು ಎಲ್ಲಾ ರೀತಿಯ ಮಾಹಿತಿ ನಾಶಪಡಿಸಿದ್ದಳು.
ಈ ಪ್ರಕರಣ ನೈರೋಬಿಯಾ ಹೈಕೋರ್ಟ್ ಮೆಟ್ಟಿಲೇರಿತ್ತು.
ಇದೀಗ ಕೋರ್ಟ್ ನಿಂದ ತೀರ್ಪು ಬಂದಿದ್ದು, ರುತ್ ಕಮಾಂಡೆಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.