ಹಳೆ ದ್ವೇಷ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ . ಊರ ಹಬ್ಬದ ವೇಳೆ ಬಣ್ಣದ ನೀರು ಎರಚಿದ್ದ ಎಂಬ ಕಾರಣ ಮುಂದಿಟ್ಟುಕೊಂಡು ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಟನ್ ಪೇಟೆಯಲ್ಲಿ ನಡೆದಿದೆ .
ಗೋವಿಂದರಾಜ್ ಎಂಬಾತ ಮೃತ. ಊರ ಹಬ್ಬದಲ್ಲಿ ಗೋವಿಂದರಾಜ್ ಹಾಗೂ ಶಂಕರದ ಬಣ್ಣದ ನೀರು ಎರಚಾಡಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಶಂಕರ್ ಗೋವಿಂದ್ ರಾಜ್ ನನ್ನು ಬರ್ಬರವಾಗಿ ಕೊಂದಿದ್ದಾನೆ.
ಆರೋಪಿ ಶಂಕರ್ ನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.