ಏಷ್ಯಾಕಪ್​ ವೇಳಾಪಟ್ಟಿ ಪ್ರಕಟ; ಇಂಡೋ – ಪಾಕ್ ಕದನ ಯಾವತ್ತು?

Date:

2018ರ ಏಷ್ಯಾಕಪ್ ವೇಳಾಪಟ್ಟಿ ಬಿಡುಗಡೆಗೊಂಡಿದೆ.

ಹಾಲಿ ಚಾಂಪಿಯನ್​ ಭಾರತ ಸೆಪ್ಟೆಂಬರ್​ 19ರಂದು ಪಾಕಿಸ್ತಾನವನ್ನು ಎದುರಿಸಲಿದೆ.
ಸೆಪ್ಟೆಂಬರ್​ 15ರಂದು ಪಂದ್ಯಾವಳಿಗಳು ಪ್ರಾರಂಭವಾಗಲಿದೆ. ದುಬೈನಲ್ಲಿ ನಡೆಯುವ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಬಾರಿ ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.
ಗ್ರೂಪ್​ ಎ ನಲ್ಲಿ ಭಾರತ, ಪಾಕಿಸ್ತಾನದ ಜೊತೆಗೆ ಕ್ವಾಲಿಫೈಯರ್​ನಲ್ಲಿ ಜಯಗಳಿಸುವ ತಂಡ ಕಾಣಿಸಿಕೊಳ್ಳಲಿದೆ. ಇನ್ನು ಗ್ರೂಪ್​ ಬಿ ನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಪೈಪೋಟಿ ನಡೆಸಲಿವೆ. ಯುಎಇ, ಸಿಂಗಾಪೂರ್​, ಓಮನ್​, ಮಲೇಷ್ಯಾ, ನೇಪಾಳ ಮತ್ತು ಹಾಂಗ್​ಕಾಂಗ್​ ತಂಡಗಳು ಏಷ್ಯಾಕಪ್​ಗೆ ಅರ್ಹತೆ ಪಡೆಯಲು ಪರಸ್ಪರ ಸೆಣಸಲಿವೆ. ಇವುಗಳಲ್ಲಿ ವಿಜಯಗಳಿಸಿದ ತಂಡ ಗ್ರೂಪ್​ ಎ ನಲ್ಲಿ ಕಾಣಿಸಿಕೊಳ್ಳಲಿದೆ.

ಗುಂಪು ಹಂತದಲ್ಲಿ ಪ್ರತೀ ಗುಂಪಿನಿಂದ ಅತೀ ಹೆಚ್ಚು ಅಂಕ ಗಳಿಸಿದ 2 ತಂಡಗಳು ಸೂಪರ್​ 4 ಕದನಕ್ಕೆ ಅವಕಾಶ ಗಿಟ್ಟಿಸಲಿವೆ. ಈ ಹಂತದಲ್ಲಿ ಮೊದಲೆರಡು ಸ್ಥಾನ ಗಳಿಸುವ 2 ತಂಡಗಳು ಫೈನಲ್​ ಪ್ರವೇಶ ಗಿಟ್ಟಿಸಿಕೊಳ್ಳಲಿವೆ.

ಭಾರತ ತಂಡ ಸೆಪ್ಟೆಂಬರ್ 18 ರಂದು ತನ್ನ ಮೊದಲ ಪಂದ್ಯ ಆಡಲಿದೆ. ಅರ್ಹತಾ ಸುತ್ತಿನಲ್ಲಿ ಜಯಗಳಿಸಿದ ತಂಡದೊಂದಿಗೆ ಭಾರತದ ಅಭಿಯಾನ ಶುರುವಾಗಲಿದೆ.
ಮರುದಿನವೇ ಭಾರತ ಪಾಕಿಸ್ತಾನವನ್ನು ಎದುರಿಸಲಿದ್ದು ಅಭ್ಯಾಸಕ್ಕೆ ಸಮಯಾವಕಾಶವೇ ಇಲ್ಲ…!

ಇಲ್ಲಿದೆ ವೇಳಾಪಟ್ಟಿ:

ಗ್ರೂಪ್​ ಸ್ಟೇಜ್​:
ಸೆಪ್ಟೆಂಬರ್​ 15 ಬಾಂಗ್ಲಾದೇಶ VS ಶ್ರೀಲಂಕಾ (ದುಬೈ)
ಸೆಪ್ಟೆಂಬರ್​ 16 ಪಾಕಿಸ್ತಾನ VS ಕ್ವಾಲಿಫೈಯರ್​ (ದುಬೈ)
ಸೆಪ್ಟೆಂಬರ್​ 17 ಶ್ರೀಲಂಕಾ VS ಅಫ್ಘಾನಿಸ್ತಾನ (ಅಬುದಾಬಿ)
ಸೆಪ್ಟೆಂಬರ್​ 18 ಭಾರತ VS ಕ್ವಾಲಿಫೈಯರ್​ (ದುಬೈ)
ಸೆಪ್ಟೆಂಬರ್​ 19 ಭಾರತ VS ಪಾಕಿಸ್ತಾನ (ದುಬೈ)
ಸೆಪ್ಟೆಂಬರ್​ 20 ಬಾಂಗ್ಲಾದೇಶ VS ಅಫ್ಘಾನಿಸ್ತಾನ (ಅಬುದಾಬಿ)

ಸೂಪರ್​ 4 ಸ್ಟೇಜ್​:
ಸೆಪ್ಟೆಂಬರ್​ 21 ಗ್ರೂಪ್​ ಎ ವಿನ್ನರ್​ VS ಗ್ರೂಪ್​ ಬಿ ರನ್ನರ್​ ಅಪ್​ (ದುಬೈ)
ಸೆಪ್ಟೆಂಬರ್​ 21 ಗ್ರೂಪ್​ ಬಿ ವಿನ್ನರ್ VS ಗ್ರೂಪ್​ ಎ ರನ್ನರ್​ ಅಪ್​ (ಅಬುದಾಬಿ)
ಸೆಪ್ಟೆಂಬರ್​ 23 ಗ್ರೂಪ್​ ಎ ವಿನ್ನರ್​ VS ಗ್ರೂಪ್​ ಎ ರನ್ನರ್​ ಅಪ್​ (ದುಬೈ)
ಸೆಪ್ಟೆಂಬರ್​ 23 ಗ್ರೂಪ್​ ಬಿ ವಿನ್ನರ್​ VS ಗ್ರೂಪ್​ ಬಿ ರನ್ನರ್​ ಅಪ್​ (ಅಬುದಾಬಿ)
ಸೆಪ್ಟೆಂಬರ್​ 25 ಗ್ರೂಪ್​ ಎ ವಿನ್ನರ್​ VS ಗ್ರೂಪ್​ ಬಿ ವಿನ್ನರ್​ (ದುಬೈ)
ಸೆಪ್ಟೆಂಬರ್​ 26 ಗ್ರೂಪ್​ ಎ ರನ್ನರ್​ ಅಪ್​ VS ಗ್ರೂಪ್​ ಬಿ ರನ್ನರ್​ ಅಪ್​ (ಅಬುದಾಬಿ)

ಫೈನಲ್​ : ಸೆಪ್ಟೆಂಬರ್​ 28 ​ (ದುಬೈ)

Share post:

Subscribe

spot_imgspot_img

Popular

More like this
Related

ಮೋದಿ ತಾಯಿಯ ಕುರಿತಾದ ಎಐ ವಿಡಿಯೋ ತೆಗೆದು ಹಾಕುವಂತೆ ಕಾಂಗ್ರೆಸ್​​ʼಗೆ ಹೈಕೋರ್ಟ್ ಸೂಚನೆ

ಮೋದಿ ತಾಯಿಯ ಕುರಿತಾದ ಎಐ ವಿಡಿಯೋ ತೆಗೆದು ಹಾಕುವಂತೆ ಕಾಂಗ್ರೆಸ್​​ʼಗೆ ಹೈಕೋರ್ಟ್...

SBI ಬ್ಯಾಂಕಿನಲ್ಲಿ 21 ಕೋಟಿ ದರೋಡೆ: ಎಸ್ಪಿ ಲಕ್ಷ್ಮಣ ನಿಂಬರಗಿ

SBI ಬ್ಯಾಂಕಿನಲ್ಲಿ 21 ಕೋಟಿ ದರೋಡೆ: ಎಸ್ಪಿ ಲಕ್ಷ್ಮಣ ನಿಂಬರಗಿ ವಿಜಯಪುರ:- SBI...

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ

ಬಿಳಿ ಕೂದಲಿಗೆ ಮನೆಮದ್ದು: ನ್ಯಾಚುರಲ್ ಹೋಮ್ ಮೇಡ್ ಹೇರ್ ಆಯಿಲ್ ಇಲ್ಲಿದೆ ತಾತ್ಕಾಲಿಕ...

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ!

ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ! ಬೆಂಗಳೂರು:...