ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ತರಗತಿಗಳ ಪ್ರವೇಶಾತಿ ಆರಂಭವಾಗಿದೆ.
ಕೇವಲ ಒಂದು ಅಥವಾ ಎರಡು ದಿನಗಳಲ್ಲಿ ಮುಗಿಸಬಹುದಾದ ಪ್ರವೇಶಾತಿ ಪ್ರಕ್ರಿಯೆಯನ್ನು ಮೂರರಿಂದ ನಾಲ್ಕು ದಿನಗಳಿಗಲ್ಲಿ ಮಾಡಲಾಗುತ್ತಿದೆ. ವಿವಿಯ ಈ ಚೆಲ್ಲಾಟದಿಂದ ವಿದ್ಯಾರ್ಥಿಗಳು ದೂರದೂರಿನಿಂದ ನಿತ್ಯ ಅಲೆದಾಡುವಂತಾಗಿದೆ.
ಜುಲೈ 23ರಿಂದ ಪ್ರವೇಶಾತಿ ಆರಂಭವಾಗಿದೆ. 23 ರಂದು ಮೆರಿಟ್ ಲೀಸ್ಟ್ ನಲ್ಲಿದ್ದ ವಿದ್ಯಾರ್ಥಿಗಳ ಪ್ರವೇಶವಿತ್ತು. ಆದರೆ ವಿವಿ ಮತ್ತು ವಿವಿ ವ್ಯಾಪ್ತಿಯ ಕಾಲೇಜುಗಳಿಗೆ ಸೇರ್ಪಡೆ ಬಯಸುವ ವಿದ್ಯಾರ್ಥಿಗಳ ಪ್ರವೇಶವನ್ನು ಮಾತ್ರ ಮಾಡಿಕೊಳ್ಳಲಾಯಿತು. ಸರ್ಕಾರಿ ಕಾಲೇಜಿಗಳಿ ಪ್ರವೇಶ ಬಯಸುವ ವಿದ್ಯಾರ್ಥಿಗಳನ್ನು ಇಂದು ಮತ್ತೊಮ್ಮೆ ಬರಬೇಕಿತ್ತು. ವಿವಿಯಲ್ಲಿ ವಿವಿ ಶುಲ್ಕ ಪಾವತಿಸುವ ಚಲನ್ ಕೊಟ್ಟು, ಮೇಲ್ನೋಟಕ್ಕೆ ದಾಖಲೆ ಪರಿಶೀಲನೆ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ…! ಇಷ್ಟು ಕೆಲಸ ಮುಗಿಸಿಕೊಂಡು ವಿದ್ಯಾರ್ಥಿಗಳು ಆಯ್ಕೆಯ ಕಾಲೇಜಿಗೆ ಹೋಗಿ ದಾಖಲಾಗಬೇಕು. ಇವತ್ತು ಅಷ್ಟೂ ವಿದ್ಯಾರ್ಥಿಗಳಿಗೆ ದಾಖಲಾಗಲು ಸಾಧ್ಯವಾಗಿಲ್ಲ. ಇನ್ನು ಈ ಪ್ರಕ್ರಿಯೆ ನಾಳೆ ಗೆ ಮುಂದುವರೆಯುತ್ತದೆ.
ಕಳೆದ ಸಾಲಿನಲ್ಲಿ ನೇರವಾಗಿ ಸಂಬಂಧಿಸಿದ ಸರ್ಕಾರಿ ಕಾಲೇಜುಗಳಲ್ಲಿ ನೇರವಾಗಿ ದಾಖಲಾಗುವ ಅವಕಾಶವಿತ್ತು. ಈ ಬಾರಿ ಇದನ್ನು ತೆಗೆದುಹಾಕಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಪರದಾಡುವಂತಾದ್ದು ಸುಳ್ಳಲ್ಲ. ಸಮಯ, ಓಡಾಟದ ಖರ್ಚು ಎಲ್ಲವೂ ದಂಡ….!
ಇನ್ನು ಪದವಿ ಅಂಕಪಟ್ಟಿ ಎಷ್ಟೋ ವಿದ್ಯಾರ್ಥಿಗಳ ಕೈಗೆ ಸಿಕ್ಕಿಲ್ಲ. ಆದ್ದರಿಂದ ದೃಢೀಕೃತ ಅಂತರ್ಜಾಲ ಪ್ರತಿಯನ್ನು ವಿದ್ಯಾರ್ಥಿಗಳು ನೀಡಿದ್ದಾರೆ. ಈ ವೇಳೆ ಕೆಲವು ವಿಭಾಗಗಳಲ್ಲಿ ಮೂಲ ಅಂಕಪಟ್ಟಿ ಇಲ್ಲ ಎಂದು ಬರೆದುಕೊಡಲು ಹೇಳಿದ್ದಾರೆ. ಅಷ್ಟಕ್ಕೇ ಇದ್ದರೆ ಪರವಾಗಿರಲಿಲ್ಲ. ಯಾವಾಗ ಮೂಲ ಅಂಕಪಟ್ಟಿ ಸಿಗುತ್ತದೆ ಎಂಬುದನ್ನು ಸಹ ಮುಚ್ಚಳಿಕೆ ಪತ್ರದಲ್ಲಿ ತಿಳಿಸಲು ಹೇಳಿದ್ದಾರೆ.…! ಅಲ್ಲಾ ಸ್ವಾಮಿ, ಹೀಗೆ ಸೂಚಿಸಿದವರ ತಲೆಯಲ್ಲೇನಿದೆ…? ವಿವಿಯಿಂದ ಅಂಕಪಟ್ಟಿ ಯಾವಾಗ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಗೆ ಗೊತ್ತಿರುತ್ತೆ?
ಇನ್ನೊಂದು ಕರ್ಮಕಾಂಡ ಎಂದರೆ ಸಂಯೋಜಿತ ಕಾಲೇಜುಗಳಿಗೆ ಸೇರ ಬಳಸುವ ವಿದ್ಯಾರ್ಥಿಗಳ ದಾರಿ ತಪ್ಪಿಸುವ ಕೆಲಸ ಕೂಡ ಆಗಿದೆ ಎಂಬ ಆರೋಪವಿದೆ. ‘ಆ ಕಾಲೇಜಿನಲ್ಲಿ ಹೆಚ್ಚು ಅಡ್ಮಿಶನ್ ಆಗಲ್ಲ. ಅಲ್ಲಿ ಕೋರ್ಸ್ ಮುಚ್ಚಲಾಗುತ್ತದೆ ‘ ಎಂಬ ತಪ್ಪು ಸಂದೇಶ ನೀಡಿ ವಿದ್ಯಾರ್ಥಿಗಳನ್ನು ವಿವಿಯಲ್ಲೇ ಉಳಿಸಿಕೊಂಡಿದ್ದೂ ಇದೆ…! ಬಳಿಕ ಎಷ್ಟೋ ವಿದ್ಯಾರ್ಥಿಗಳೀಗ ಬಯಸಿದ ಕಾಲೇಜಿಗೆ ವರ್ಗಾವಣೆ ಕೋರಬೇಕಿದೆ. ಇಂಥಾ ಹತ್ತಾರು ಅವ್ಯವಸ್ಥೆಗಳು ಪ್ರವೇಶಾತಿ ವೇಳೇಯಲ್ಲೇ ಜಗಜ್ಜಾಹಿರವಾಗಿದೆ…! ಇನ್ನು ಇಡೀ ಆಡಳಿತ ವ್ಯವಸ್ಥೆ ಹೇಗಿರಬೇಡ? ಎಂಬ ಸಹಜ ಪ್ರಶ್ನೆ ಮೂಡುವುದು ಸಹಜವಲ್ಲವೇ?