ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ನಂತರ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಪ್ರಸಿದ್ಧ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನವನ್ನು ಮುಚ್ಚಲಾಗುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಮಧ್ಯಾಹ್ನ 12.30ರಿಂದ ನಾಳೆ ಮುಂಜಾನೆವರೆಗೂ ದೇವಾಲಯ ಬಂದ್ ಆಗಲಿದೆ. ಮಹಾಮಂಗಳರಾತಿ ಬಳಿಕ ಮುಚ್ಚಿ ನಾಳೆ ಬೆಳಗ್ಗೆ 5ಗಂಟೆಗೆ ಎಂದಿನಂತೆ ತೆಗೆಯಲಾಗುತ್ತದೆ.