ಇಂದು ಚಂದ್ರಗ್ರಹಣ ಸಂಭವಿಸಲಿದ್ದು, ಗರ್ಭಿಣಿಯರು ಗ್ರಹಣ ನೋಡಬಾರದು. ಚಂದ್ರಗ್ರಹಣ ನೋಡುವುದು ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ.
ಗರ್ಭಿಣಿಯರು ಹೊರ ಹೋಗದೆ ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಒಳ್ಳೆಯದು. ತಿನ್ನುವುದು, ಕುಡಿಯುವುದಕ್ಕೆ, ನೈಸರ್ಗಿಕಕರೆಗಳಿಗೆ ಯಾವುದೇ ನಿರ್ಧಿಷ್ಟ ನಿಯಮವಿಲ್ಲ ಎಂದು ಶಾಸ್ತ್ರ ಹೇಳುತ್ತದೆ.
ಇಷ್ಟೊಂದು ದೀರ್ಘಾವದಿಯ ಚಂದ್ರಗ್ರಹಣ ಇಂದು ಬಿಟ್ಟರೆ 2028ರ ಡಿಸೆಂಬರ್ 31ರಂದು.
ಇಂದು ಈ ಗ್ರಹಣವು ಭಾರತದಲ್ಲಿಯೂ ಸಂಭವಿಸುತ್ತದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಇರೋದ್ರಿಂದ ಗ್ರಹಣ ಗೋಚರಿಸುವುದು ಕಷ್ಟ. ಅದೇ ರೀತಿ ವಾಯುಮಾಲಿನ್ಯ ಹೆಚ್ಚಿರುವ ನಗರ ಪ್ರದೇಶಗಳಲ್ಲಿ,ಮೋಡ ಇರುವ ಪ್ರದೇಶಗಳಲ್ಲಿ ನೋಡಲು ಸಾಧ್ಯವಿಲ್ಲ.