ಪಾಪಿ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಂದು ಶೌಚಾಲಯ ಗುಂಡಿಯಲ್ಲಿ ಹೂತಿಟ್ಟ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ ನಡೆದಿದೆ.
ನಾಗಮ್ಮ (70) ಮಗನಿಂದ ಕೊಲೆಯಾದ ನತದೃಷ್ಟೆ. ಸುರೇಶ್ ಎಂಬಾತನೇ ತಾಯಿಯನ್ನು ಕೊಂದ ಪಾಪಿ.
ಜಮೀನಿನ ವಿಚಾರವಾಗಿ ನಡೆದ ಜಗಳ ನಾಗಮ್ಮ ಅವರ ಕೊಲೆಯಲ್ಲಿ ಅಗತ್ಯವಾಗಿದೆ.
ಮೃತೆ ನಾಗಮ್ಮಳ ಹೆಸರಲ್ಲಿ 10 ಗುಂಟೆ ಜಮೀನಿದ್ದು, ಅದನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಸುರೇಶ್ ಪದೇ ಪದೇ ಜಗಳ ಮಾಡ್ತಿದ್ದ. ಮೂರು ದಿನಗಳ ಹಿಂದೆ ಕುಡಿದು ಬಂದ ಈತ ಅದೇ ವಿಚಾರವಾಗಿ ಜಗಳವಾಡಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಉಸಿರುಟ್ಟಿಸಿ ಕೊಂದು ಶೌಚಾಲಯದ ಗುಂಡಿಯಲ್ಲಿ ಶವ ಹೂತು , ತನಗೇನು ಗೊತ್ತೇ ಇಲ್ಲ ಎಂಬಂತೆ ನಟಿಸಿದ್ದಾನೆ.
ಸ್ಥಳಕ್ಕೆ ಆಗಮಿಸಿದ ಎಂಕೆ ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಲರಣ ದಾಖಲಿಸಿಕೊಂಡಿದ್ದಾರೆ. ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.