ಕೆಟಿಆರ್ ಸವಾಲು ಪೂರ್ಣಗೊಳಿಸಿದ ಸಚಿನ್, ಲಕ್ಷ್ಮಣ್

Date:

ಮುಂಬೈ : ಮಾಜಿ ಕ್ರಿಕೆಟಿಗರಾದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ವಿ .ವಿ.ಎಸ್ ಲಕ್ಷ್ಮಣ್ ನಗರಾಭಿವೃದ್ಧಿ ಸಚಿವ ಕೆ.ಟಿ ರಾಮರಾವ್ ನೀಡಿದ್ದ #HarithaHaram ಚಾಲೆಂಜ್ ಸ್ವೀಕರಿಸಿ, ಸವಾಲು ಪೂರ್ಣಗೊಳಿಸಿದ್ದಾರೆ.
ಸಚಿನ್ ಮತ್ತು ಲಕ್ಷ್ಮಣ್ ತಮ್ಮ ಮನೆಯ ಅಂಗಳದಲ್ಲಿ ಮೂರು ಸಸಿಗಳನ್ನು ನೆಡುವ ಮೂಲಕ ಚಾಲೆಂಜ್ ಪೂರ್ಣಮಾಡಿದ್ದಾರೆ. ಸವಾಲು ಪೂರ್ಣಗೊಳಿಸುವ ಮೂಲಕ ನಮ್ಮ ರಾಜ್ಯವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡೋಣ ಎಂಬ ಸಂದೇಶವನ್ನು ನೀಡಿದ್ದಾರೆ.

ಕೆಟಿಆರ್ ನೀಡಿದ ಸವಾಲನ್ನು 24 ಗಂಟೆಗಳಲ್ಲಿ ಪೂರ್ಣಮಾಡಿ ಸಚಿನ್ ಟ್ವಿಟ್ಟರ್ ‌ನಲ್ಲಿ ಫೋಟೋ ಹಾಕಿದ್ದಾರೆ. ಸಚಿನ್ ಅವರಂತೆ ಲಕ್ಷ್ಮಣ್ ಸಹ ಮೂರು ಫೋಟೋ ಅಪ್ ಲೋಡ್ ಮಾಡಿ ತಾನು ಕೆಟಿಆರ್ ಚಾಲೆಂಜ್ ಪೂರ್ಣಗೊಳಿಸಿರುವುದಾಗಿ ಹೇಳಿದ್ದಾರೆ.
ತಾನು ಮನೆ ಅಂಗಳದಲ್ಲಿ ದಾಳಿಂಬೆ, ನೀರ್ ಸೇಬು ಲಕ್ಷ್ಮಣ ಹಣ್ಣಿನ ಸಸಿಗಳನ್ನು ನೆಟ್ಟಿದ್ದೇನೆ. ಈ ಚಾಲೆಂಜ್ ಅನ್ನು ವೀರೇಂದ್ರ ಸೆಹ್ವಾಗ್, ಮಿಥಾಲಿ ರಾಜ್ ,‌ಪಿ.ವಿ ಸಿಂಧು ಅವರಿಗೆ ವರ್ಗಾಯಿಸ್ತಿದ್ದೀನಿ ಎಂದು ವಿವಿಎಸ್ ಬರೆದುಕೊಂಡಿದ್ದಾರೆ.

ಈ ಕೆ.ಟಿ.ರಾಮರಾವ್ ಅವರಿಗೆ ಈ ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಚಾಲೆಂಜ್ ನೀಡಿದ್ದರು. ಚಾಲೆಂಜ್ ಸ್ವೀಕರಿಸಿದ್ದ ಕೆಟಿಆರ್ ಸಹ ಮೂರು ಸಸಿಗಳನ್ನು ನಾಟಿ ಮಾಡಿದ್ದರು. ರಾಜಮೌಳಿ ಅವರಿಗೆ ನಿಜಾಮಾಬಾದ್ ಸಂಸದೆಯಾಗಿರುವ ಕವಿತಾ ರಾವ್ #HarithaHaram ನೀಡಿದ್ದರು. ಈ ಚಾಲೆಂಜ್ ಒಬ್ಬರಿಂದ ಒಬ್ಬರಿಗೆ ವರ್ಗಾವಣೆ ಮಾಡುವ ಮೂಲಕ ನಮ್ಮ ಪರಿಸರವನ್ನು ಹಸಿರಾಗಿಸೋಣ ಎಂಬ ಉದ್ದೇಶದಿಂದ ಆರಂಭಿಸಲಾಗಿದೆ.

Share post:

Subscribe

spot_imgspot_img

Popular

More like this
Related

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು...

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಪಾಸ್ ಆಗಲು ಶೇ.33 ಅಂಕ ಸಾಕು: ಸಚಿವ ಮಧು ಬಂಗಾರಪ್ಪ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಪಾಸ್ ಆಗಲು ಶೇ.33 ಅಂಕ ಸಾಕು:...

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ?

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ? ಬೆಲೆ ಏರಲಿ,...

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು ನಿಂಬೆಹಣ್ಣು ನಮ್ಮ...