ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆಯರ್ ಅಲ್ಲ…ಈಗ ಒಡೆಯ.
ದರ್ಶನ್ ಅಭಿನಯದ ಹೊಸ ಸಿನಿಮಾಕ್ಕೆ ‘ಒಡೆಯರ್’ ಎಂದು ಹೆಸರಿಡಲಾಗಿತ್ತು. ಸಂದೇಶ್ ನಾಗರಾಜ್ ನಿರ್ಮಾಣದ ಈ ಸಿನಿಮಾ ಇದೇ 16ರಂದು ಸೆಟ್ಟೇರಬೇಕಿತ್ತು.
ಈ ಟೈಟಲ್ ಗೆ ಮೈಸೂರು ಸೇರಿದಂತೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಒಡೆಯರ್ ಎಂಬ ಟೈಟಲ್ ಇಡಬಾರದೆಂದು ಒತ್ತಾಯಿಸಲಾಗಿತ್ತು. ಈ ಬಗ್ಗೆ ದೂರು ಸಹ ದಾಖಲಾಗಿತ್ತು.
ಈಗ ಒಡೆಯರ್ ಟೈಟಲ್ ಬಳಸದೇ ಇರಲು ನಿರ್ಧರಿಸಲಾಗಿದೆ. ಚಿತ್ರಕ್ಕೆ ಒಡೆಯ ಎಂಬ ಹೆಸರಿಡಲಾಗಿದೆ . ಆಗಸ್ಟ್ 16ರಂದು ಸಂದೇಶ್ ನಾಗಜ್ ಅವರ ನಿವಾಸದಲ್ಲಿ ಸರಳವಾಗಿ ಸೆಟ್ ಏರಲಿದೆ ಎಂ ಡಿ ಶ್ರೀಧರ್ ಆ್ಯಕ್ಷನ್ ಕಟ್ ಹೇಳ್ತಿರೋ ಈ ಸಿನಿಮಾ.
ಮುಹೂರ್ತಕ್ಕೆ ರೆಬಲ್ ಸ್ಟಾರ್ ಅಂಬರೀಶ್, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬರಲಿದ್ದಾರೆ.