ನೀವು ಆ್ಯಂಡ್ರಾಯ್ಡ್ ಫೋನ್ ಬಳಸ್ತಿದ್ದೀರ? ಹುಷಾರ್ ‌ನಿಮ್ಮ ಖಾಸಗಿ ತನಕ್ಕೆ ಬೀಳುತ್ತದೆ ಕನ್ನ….!

Date:

ನೀವು ಆ್ಯಂಡ್ರಾಯ್ಡ್ ಫೋನ್ ಬಳಸುತ್ತಿದ್ದೀರ? ಹಾಗಾದರೆ ಸ್ವಲ್ಪ ಹುಷಾರಾಗಿರಿ , ನಿಮ್ಮ ಖಾಸಗಿ ತನಕ್ಕೆ ಕನ್ನ ಬೀಳಲಿದೆ…!

ಆ್ಯಂಡ್ರಾಯ್ಡ್ ಮೊಬೈಲ್ ಫೋನ್ ಗಳಲ್ಲಿ ಶುಕ್ರವಾರದಿಂದ ಆಧಾರ್ ಪ್ರಾಧಿಕಾರದ ಸಹಾಯವಾಣಿ ಹೆಸರಲ್ಲಿ 18003001947 ಎಂಬ ಸಂಖ್ಯೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದೆ.‌ ಈ ಸುದ್ದಿ ಈಗ ವೈರಲ್ ಆಗಿದ್ದು, ಇದನ್ನು ಸೇರ್ಪಡೆ ಮಾಡಿದ್ದು ಯಾರು? ಸೂಚನೆ ನೀಡಿದ್ಯಾರು ಎಂಬ ಪ್ರಶ್ನೆಗಳು ಮೂಡಿವೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಘಟನೆ ಕುರಿತು ಆ್ಯಂಡ್ರಾಯ್ಡ್ ಆ್ಯಪ್‌ನ ನಿರ್ಮಾತೃ ಸಂಸ್ಥೆಯಾದ ‘ಗೂಗಲ್’ ಕ್ಷಮೆಯಾಚಿಸಿದೆ.
2018 ರಲ್ಲಿ ಆ್ಯಂಡ್ರಾಯ್ಡ್ ಸೆಟಪ್ ವಿಜರ್ಡ್ ರೂಪಿಸುವಾಗ ಅಚಾತುರ್ಯವಾಗಿ ಆಧಾರ್‌ನ ಅಂದಿನ ಹೆಲ್ಪ್‌ಲೈನ್ ನಂಬರ್ ಮತ್ತು ತುರ್ತು ಸಂದರ್ಭದಲ್ಲಿ ಬಳಸಲು ಇರುವ 112 ಸಂಖ್ಯೆ ಸೇರ್ಪಡೆ ಯಾಗಿತ್ತು. ಇದು ಇದೀಗ ಆ್ಯಪ್ ಆಪ್‌ಡೇಟ್ ಆದ ಸಂದರ್ಭದಲ್ಲಿ ಮೊಬೈಲ್‌ನ ಫೋನ್‌ಬುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಗೊಂದಲಕ್ಕೆ ಕಾರಣವಾಗಿದೆ ಎಂದು ಹೇಳಿದೆ.


ಇದು ಯಾವುದೇ ರೀತಿಯಲ್ಲೂ ಮೊಬೈಲ್ ಬಳಕೆದಾರರ ಖಾಸಗಿತನವನ್ನು ಭೇದಿಸುವ ಯತ್ನ ಇಲ್ಲಿಲ್ಲ ಎಂದು ಹೇಳಿದೆ. . ಶೀಘ್ರವೇ ನಾವು ಈ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸ್ಪಷ್ಟಪಡಿಸಿದೆ.

ಶುಕ್ರವಾರ ಆ್ಯಂಡ್ರಾಯ್ಡ್ ಆಧಾರಿತ ಮೊಬೈಲ್ ಫೋನ್‌ಗಳಲ್ಲಿನ ದೂರವಾಣಿ ಸಂಖ್ಯೆಗಳೊಂದಿಗೆ ‘ಯುಐಡಿಎಐ ನಂಬರ್’ ಎಂಬ ಹೆಸರಿನಲ್ಲಿ ಸಂಖ್ಯೆ ಅದಕ್ಕಷ್ಟೇ ಅದೇ ಸೇರ್ಪಡೆಗೊಂಡಿತ್ತು. ಗೂಗಲ್ ಕಂಪನಿ ಕೇಂದ್ರ ಸರ್ಕಾರ ಅಥವಾ ಆಧಾರ್ ಪ್ರಾಧಿಕಾರದ ಸೂಚನೆ ಮೇರೆಗೆ ಈ ಸಂಖ್ಯೆಯನ್ನು ಸೇರಿಸಿರಬಹುದು ಎಂಬ ವಾದಗಳು ಕೇಳಿಬಂದಿದ್ದವು. ಆದರೆ ಇದನ್ನು ತಳ್ಳಿ ಹಾಕಿದ್ದ ಆಧಾರ್ ಪ್ರಾಧಿಕಾರ, ಆ್ಯಂಡ್ರಾಯ್ಡ್ ಮೊಬೈಲ್ ಫೋನ್ ಗಳಲ್ಲಿ ಪತ್ತೆಯಾಗಿರುವ ಸಂಖ್ಯೆ ತನ್ನ ಸಹಾಯವಾಣಿಯೇ ಅಲ್ಲ ಎಂದು ಸ್ಪಷ್ಟಪಡಿಸಿತ್ತು. ಫೋನ್‌ಬುಕ್‌ನಲ್ಲಿ ಸಹಾಯವಾಣಿ ಸಂಖ್ಯೆ ಸೇರಿಸಲು ಯಾವುದೇ ಮೊಬೈಲ್ ಉತ್ಪಾದಕ ಕಂಪನಿ ಅಥವಾ ಸೇವಾದಾತ ಕಂಪನಿಗೆ ಸೂಚನೆ ನೀಡಲಾಗಿಲ್ಲ. ಮೊಬೈಲ್‌ಗಳಲ್ಲಿ ಕಂಡುಬರುತ್ತಿರುವುದು ಈ ಹಿಂದೆ ಬಳಸುತ್ತಿದ್ದ ಸಹಾಯವಾಣಿ ಸಂಖ್ಯೆ. ಕಳೆದ ಎರಡು ವರ್ಷಗಳಿಂದ ಆಧಾರ್ ಸಹಾಯವಾಣಿ ‘1947 ’ ಆಗಿದೆ ಎಂದಿತ್ತು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...