ಬ್ಲೇಡ್ ನಿಂದ ಬಾಲಕನ ಮರ್ಮಾಂಗ ಮತ್ತು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಸಮೀಪ ನಡೆದಿದೆ.
ಮುತ್ತಪ್ಪ ಅಮಜಗೋಳ ಎಂಬ 4ವರ್ಷದ ಬಾಲಕ ಕೊಲೆಯಾದವ. ನಿಧಿಗಾಗಿ ಬಾಲಕನನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈತನ ಕಿವಿಯೋಲೆ, ಉಡದಾರ, ಕೊರಳಿನಲ್ಲಿದ್ದ ತಾಯತ ಕಿತ್ತು ಕೊಲೆಗೈದಿದ್ದಾರೆ ಎಂದು ಪೋಷಕರು ಹೇಳುತ್ತಿದ್ದಾರೆ. ಬನಹಟ್ಟಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.