ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬೌರಿಂಗ್ ಕ್ಲಬ್ ಜಾಗದ ಬಾಡಿಗೆ ವರ್ಷಕ್ಕೆ ಕೇವಲ 30ರೂ ಮಾತ್ರ…! 10 ಎಕರೆ ಜಾಗದಲ್ಲಿರುವ ಇದು ಬಿಬಿಎಂಪಿಗೆ ವರ್ಷಕ್ಕೆ ಕೇವಲ 30ರೂ ಬಾಡಿಗೆ ಕೊಡುತ್ತಿದೆ…! ವಿಚಿತ್ರವೆಂದರೆ ಬೌರಿಂಗ್ ಕ್ಲಬ್ ನ ಸದಸ್ಯತ್ವ ಪಡೆಯಲು 20ಲಕ್ಷ ರೂ ನೀಡಬೇಕು…!
1956ರಲ್ಲಿ 99 ವರ್ಷಗಳ ಅವಧಿಗೆ ಬೌರಿಂಗ್ ಕ್ಲಬ್ ಗೆ 10 ಎಕರೆ ಜಾಗವನ್ನು ವಾರ್ಷಿಕ 30 ರೂ ಬಾಡಿಗೆ ನಿಗಧಿಪಡಿಸಿ ಬಿಬಿಎಂಪಿ ಗುತ್ತಿಗೆ ನೀಡಿದೆ. 2055ರವರೆಗೆ ಈ ಜಾಗವು ಬೌರಿಂಗ್ ಕ್ಲಬ್ ನ ಸುಪರ್ದಿಯಲ್ಲಿರಲಿದೆ. ವಾರ್ಷಿಕ 30 ರೂ ಬಾಡಿಗೆ ನೀಡುವ ಓ ಕ್ಲಬ್ ನ ತಾತ್ಕಾಲಿಕ ಸದಸ್ಯತ್ವಕ್ಕೇ 20ಲಕ್ಷ ರೂ ಕೊಡಬೇಕು…!
ನಿಗದಿ ಮಾಡಲಾಗಿದ್ದ ಮೊತ್ತ ಹೆಚ್ಚಿಸುವಂತೆ 1956ರಲ್ಲಿ ಆರ್.ದಯಾನಂದ್ ಕೌನ್ಸಿಲ್‍ನಲ್ಲಿ ವಾದ ಮಂಡಿಸಿದ್ದರು. 99 ವರ್ಷಗಳ ಬದಲಿಗೆ 10 ವರ್ಷಕ್ಕೆ ಗುತ್ತಿಗೆ ನೀಡಿದ್ರೆ ಒಳ್ಳೆಯದು ಎಂಬುವುದು ದಯಾನಂದವರ ವಾದವಾಗಿತ್ತು. ಅಂದು ನಡೆದ ಸಭೆಯಲ್ಲಿ ಕ್ಲಬ್‍ಗೆ 99 ವರ್ಷಕ್ಕೆ ಜಾಗ ಗುತ್ತಿಗೆ ನೀಡುವುದರ ಪರವಾಗಿ 19 ಮತಗಳ ಚಲಾವಣೆಯಾದ್ರೆ, ವಿರೋಧವಾಗಿ 4 ಮತಗಳು ಮಾತ್ರ ಚಲಾವಣೆಯಾದಗಿದ್ದವು.
ಲಾಕರ್ ನಲ್ಲಿ ಅಕ್ರಮ ಸಂಪತ್ತು ಪತ್ತೆಯಾದ ಬಳಿಕ ಬಾಡಿಗೆ ಹೆಚ್ಚಿಸುವ ಕುರಿತು ಬಿಬಿಎಂಪಿಯಲ್ಲಿ ಚರ್ಚೆ ನಡೆಯುತ್ತಿದೆ.