ಕೌಟುಂಬಿಕ ಕಲಹ ಬೀದಿಗೆ ಬಂದು, ಮೈದುನ ಅತ್ತಿಗೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಆನೇಕಲ್ ಬಳಿ ನಡೆದಿದೆ.
ಆನೇಕಲ್- ಹೊಸೂರು ರಸ್ತೆಯ ಹೊಂಪಲಘಟ್ಟ ಕ್ರಾಸ್ ಬಳಿ ಘಟನೆ ನಡೆದಿದೆ. ನಾಗೇಶ್ ಆರೋಪಿ. ರಾಜಮ್ಮ (40) ಹಲ್ಲೆಗಳೊಗಾದವರು.
ರಾಜಮ್ಮ ಹಾಗೂ ನಾಗೇಶ್ ಗೆ ಮನೆ ಖಾಲಿ ಮಾಡುವ ವಿಚಾರವಾಗಿ ಈ ಹಿಂದೆ ಮನಸ್ತಾಪ ಇತ್ತು. ಕಳೆದ ಒಂದು ವಾರದ ಹಿಂದಷ್ಟೇ ನಾಗೇಶ್ ಬೇರೆ ಮನೆಗೆ ಸ್ಥಳಾಂತರಗೊಂಡಿದ್ದ. ಈ ನಡುವೆ ಕಳೆದ ಮೂರು ದಿನಗಳ ಹಿಂದೆ ರಾಜಮ್ಮರನ್ನು ಬೈಕ್ ನಲ್ಲೆ ಕರೆತರುವಾಗ ಮಾತಿಗೆ ಮಾತು ಬೆಳೆದು ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ್ದಾನೆ. ನಂತರ ತೀವ್ರ ಗಾಯಗೊಂಡಿದ್ದ ರಾಜಮ್ಮನಿಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆತರಲಾಗಿದೆ.