ತಮ್ಮ ನಾಯಕರೇ ಗ್ರೇಟ್ ಎಂದು ಶುರುವಾದ ಜಗಳ ಸಾವಿನಲ್ಲಿ ಅಂತ್ಯ…!

admin
By admin
1 Min Read

ತಮ್ಮ ನಾಯಕರೇ ಗ್ರೇಟ್ ಎಂದು ಬಾರಿ ನಲ್ಲಿ ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗೊಬ್ಬರಗಾಲ ಗ್ರಾಮದಲ್ಲಿ ನಡೆದಿದೆ.ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರ ನಡುವೆ ನಡೆದ ಗಲಾಟೆ ಯುವಕನೊಬ್ಬನ ಆತ್ಮಹತ್ಯೆಯೊಂದಿಗೆ ಅಂತ್ಯ ಕಂಡಿದೆ.

ಶ್ರೀರಂಗಪಟ್ಟಣ ಕ್ಷೇತ್ರದ ಮಾಜಿ ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ ಬೆಂಬಲಿಗ ನಾಗೇಂದ್ರ (28) ಆತ್ಮಹತ್ಯೆ
ಗೆ ಶರಣಾದ ಯುವಕ.‌ ನಿನ್ನೆ ರಾತ್ರಿ ಅರಕೆರೆ ಗ್ರಾಮದ ಬಾರಿನಲ್ಲಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಮಾಜಿ ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ ಬೆಂಬಲಿಗರ ನಡುವೆ ತಮ್ಮ ನಾಯಕರೇ ಗ್ರೇಟ್ ಎಂದು ಗಲಾಟೆ ನಡೆದಿದೆ. ಈ ವೇಳೆ ಶಾಸಕರ ಬೆಂಬಲಿಗರು ನಾಗೇಂದ್ರನ ಮೇಲೆ ಹಲ್ಲೆ ಮಾಡಿದ್ದಾರೆ.
ಬಳಿಕ ಆತನ ಸ್ವಗ್ರಾಮ ಗೊಬ್ಬರಗಾಲ ಗ್ರಾಮಕ್ಕೆ ಹೋಗಿ ಗಲಾಟೆ ಮಾಡಿದ್ದಾರೆ. ಇದರಿಂದ ಆತ ಕೆರೆಯ ಬಳಿ ಇರುವ ಮರಕ್ಮೆ ನೇಣು ಹಾಕಿಕೊಂಡಿದ್ದಾರೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article