ಶೀರೂರು ಪಟ್ಟದ ದೇವರಾದ ವಿಠ್ಠಲ ದೇವರ ವಿಗ್ರಹವನ್ನು ಇಂದು ಕೃಷ್ಣಮಠದಿಂದ ಶೀರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠಕ್ಕೆ ಹಸ್ತಾಂತರ ಮಾಡಿದ್ದಾರೆ.
ಅಷ್ಟ ಮಠಗಳಲ್ಲಿ ಒಂದಾದ ಶೀರೂರಿನ ಲಕ್ಷ್ಮೀವರ ತೀರ್ಥ ಶ್ರೀಗಳು ವಿಧಿವಶರಾದ ಮೇಲೆ ಇದೀಗ ದೇವರನ್ನ ದ್ವಂದ್ವ ಮಠಕ್ಕೆ ಹಸ್ತಾಂತರಿಸಿದ್ದಾರೆ.
ಈಗ ಅನ್ನ ವಿಠ್ಠಲ ದೇವರು ಸೋದೆ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರ ಕೈ ಸೇರಿದೆ.
ನಾಲ್ಕು ತಿಂಗಳಿಂದ ಅನ್ನ ವಿಠ್ಠಲ ದೇವರಿಗೆ ಉಡುಪಿಯ ಕೃಷ್ಣ ಮಠದಲ್ಲಿಯೇ ಪೂಜೆ ನಡೆಯುತ್ತಿತ್ತು. ವಿಶ್ವವಲ್ಲಭ ತೀರ್ಥ ಶ್ರೀಗಳು ಕೃಷ್ಣಮಠದಿಂದ ಉತ್ತರ ಕನ್ನಡ ಜಿಲ್ಲೆಯ ಸೋದೆ ಮಠಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸುತ್ತಿದ್ದಾರೆ. ಪರ್ಯಾಯ ಪಲಿಮಾರು ವಿದ್ಯಾಧೀಶ ಶ್ರೀಗಳು ಅನ್ನ ವಿಠ್ಠಲ ದೇವರನ್ನು ಹಸ್ತಾಂತರ ಮಾಡಿದ್ದಾರೆ.