ಜೀವತೆಗೆಯುವ ಅಪಾಯಕಾರಿ ಬ್ಲೂವೆಲ್ ಗೇಮ್ ವಿಶ್ವದಾದ್ಯಂತ ಅನೇಕ ಜೀವಗಳನ್ನು ತೆಗೆದಿದೆ. ಇದೀಗ ಬ್ಲೂವೆಲ್ ನಂತೆ ಅಪಾಯಕಾರಿ ಮೊಮೊ ಚಾಲೆಂಜ್ ಹುಟ್ಟಿಕೊಂಡಿದೆ.
ಈ ಚಾಲೆಂಜ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಆಟವನ್ನು ಫೇಸ್ ಬುಕ್ ಮತ್ತು ವಾಟ್ಸಪ್ ಮೂಲಕ ಆಡಲಾಗುತ್ತದೆ. ಇದು ಜನ ತಮ್ಮ ಜೀವವನ್ನು ತಾವೇ ತೆಗೆದುಕೊಳ್ಳುವಂತೆ ಮಾಡುವಂತೆ ಪ್ರಚೋದನೆ ನೀಡುತ್ತದೆ.
ಇದೊಂದು ಡೆಡ್ಲಿಗೇಮ್ ಆಗಿದ್ದು, ಆಟ ಪೂರ್ಣಗೊಳಿಸದೇ ಇದ್ದರೆ ಕಠಿಣ ಶಿಕ್ಷೆ ನೀಡುತ್ತೆ…! ಇದನ್ನು ಜಪಾನಿನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದು ಮಕ್ಕಳನ್ನು ಅತಿಹೆಚ್ಚಾಗಿ ಸೆಳೆಯುತ್ತದೆ.
ಈಗಾಗಲೇ ಅರ್ಜೆಂಟೀನಾದಲ್ಲಿ 12ವರ್ಷದ ಬಾಲಿಯೊಬ್ಬಳು ಈ ಗೇಮ್ ಗೆ ಬಲಿಯಾಗಿದ್ದಾಳೆ. ಮೊಮೊ ಹೆಸರಿನ ವಿಕೃತಗೊಂಬೆಯ ಚಿತ್ರದೊಂದಿಗೆ ಈ ಗೇಮ್ ಕಾಣಿಸಿಕೊಂಡಿದೆ.