ಮಿನಿಮಮ್ ಬ್ಯಾಲೆನ್ಸ್ ,ಅಂದ್ರೆ ಕನಿಷ್ಠ ಠೇವಣಿಗೆ ಸಂಬಂಧಿಸಿದಂತೆ ವಿಧಿಸಲಾಗಿರೋ ದಂಡದ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆ ಹೊರಡಿಸಿದೆ.
ಮಿನಿಮಮ್ ಬ್ಯಾಲೆನ್ಸ್ ಮೆಂಟೆನೆನ್ಸ್ ಕುರಿತು ಜನ ಆಕ್ರೋಶ ವ್ಯಕ್ತಪಡಿಸಿದ್ದನ್ನು ಮನಗಂಡ ಎಸ್ ಬಿಐ ಠೇವಣಿ ವರ್ಗೀಕರಿಸಿ ದಂಡ ವಿಧಿಸಿ ಪ್ರಕಟಣೆ ಹೊರಡಿಸಿದೆ.
ಎಲ್ಲಾ ಉಳಿತಾಯ ಖಾತೆಗಳಿಗೂ ಕನಿಷ್ಠ ಠೇವಣಿಯನ್ನೂ ಸಹ ಶೇ. 40ರಷ್ಟು ಇಳಿಕೆ ಮಾಡಲಾಗಿದೆ ಎಂದು ಎಸ್‌ಬಿಐ ಹೇಳಿದೆ. ಕಳೆದ ಏಪ್ರಿಲ್‌ನಲ್ಲೇ ಕನಿಷ್ಠ ಠೇವಣಿ ಮೊತ್ತವನ್ನು ಇಳಿಕೆ ಮಾಡಲಾಗಿದ್ದು, ಅದಾಗ್ಯೂ 2,433 ಕೋಟಿ ರೂ. ದಂಡ ಸಂಗ್ರಹವಾಗಿದೆ ಎಂದು ತಿಳಿಸಿದೆ.
ಎಸ್‌ಬಿಐ ಖಾತೆಗಳನ್ನು ಗ್ರಾಮೀಣ, ಅರೆ ನಗರ, ನಗರ ಮತ್ತು ಮೆಟ್ರೋ ಎಂದು ನಾಲ್ಕು ವರ್ಗೀಕರಣ ಮಾಡಲಾಗಿದ್ದು, ಎಲ್ಲಾ ಪ್ರಕಾರದ ಖಾತೆಗಳಿಗೂ ಬೇರೆ ಬೇರೆ ರೂಪದ ಕನಿಷ್ಠ ಠೇವಣಿ ಮೊತ್ತ ನಿಗದಿ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಎಸ್‌ಬಿಐ ವರ್ಗೀಕರಣದಂತೆ ಕನಿಷ್ಠ ಠೇವಣಿ ಮೊತ್ತ ಹೀಗಿದೆ.
ಮೆಟ್ರೋ-3000 ರೂ.
ನಗರ-2000 ರೂ.
ಅರೆ ನಗರ-2000 ರೂ
ಗ್ರಾಮೀಣ-1000 ರೂ.
ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ದಂಡದ ಮೊತ್ತವನ್ನು ಶೇ. 70 ರಷ್ಟು ಮತ್ತು ಅರೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ75 ರಷ್ಟು ದಂಡದ ಮೊತ್ತವನ್ನು ಕಡಿತ ಮಾಡಲಾಗಿದೆ. ಅಲ್ಲದೇ ತಿಂಗಳಿಗೆ ಕೇವಲ 5 ರೂ.ನಿಂದ 15 ರೂ ವರೆಗೆ ಮಾತ್ರ ದಂಡ ಹಾಕಲಾಗುತ್ತದೆ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ.