ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಬರೀ ಪೊಲಿಟಿಷಿಯನ್ ಅಷ್ಟೇ ಆಗಿರಲಿಲ್ಲ. ಅವರು ಉತ್ತಮ ಸಾಹಿತಿ ಕೂಡ ಆಗಿದ್ರು. ಆದ್ರೆ ಕರುಣಾನಿಧಿ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದು ವಿವಾದಗಳಿಂದ….! ಕರುಣಾನಿಧಿ ತಮ್ಮ ಜೀವನದಲ್ಲಿ ಮಾಡಿಕೊಂಡ ಕಾಂಟ್ರೋವರ್ಸಿಗಳು ಯಾವುವು..? ಅವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು ಯಾಕೆ?
ಕರುಣಾನಿಧಿ. ತಮಿಳುನಾಡಿನ ಮೋಸ್ಟ್ ಪವರ್ಫುಲ್ ಪೊಲಿಟಿಷಿಯನ್ ಆಗಿದ್ರು.. ಅಣ್ಣಾದೊರೈ ಸ್ಥಾಪಿಸಿದ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವನ್ನು ಕಟ್ಟಿ ಬೆಳೆಸಲು ಅವರು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ರು. ನಿಮಗೆ ಗೊತ್ತಿದೆಯೋ ಇಲ್ವೋ ನಿಜ ಹೇಳಬೇಕು ಅಂದ್ರೆ ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪ್ರತಿಸ್ಪರ್ಧಿಯಾಗಿ ನಿಂತು, ಇಡೀ ತಮಿಳುನಾಡಿನಲ್ಲಿ ಕ್ಲಿಯರ್ ಮೆಜಾರಿಟಿ ಪಡೆದುಕೊಂಡ ಪ್ರಪ್ರಥಮ ರಾಜಕೀಯ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ. ಇಂಥ ಪಕ್ಷವನ್ನು ಮುನ್ನಡೆಸಿದ ಹೆಗ್ಗಳಿಕೆ ಕರುಣಾನಿಧಿಯವರಿಗೆ ಸಲ್ಲುತ್ತೆ. 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಕರುಣಾನಿಧಿ ತಮ್ಮ ಜೀವನದಲ್ಲಿ ಸುಮಾರು 61 ವರ್ಷಗಳ ಕಾಲ ಸಕ್ರಿಯ ರಾಜಕಾರಣಿ ಅನ್ನಿಸಿಕೊಂಡಿದ್ರು. ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ ಕರುಣಾನಿಧಿ 61 ವರ್ಷಗಳ ರಾಜಕೀಯ ಜೀವನದಲ್ಲಿ ಸೋಲಿಲ್ಲದ ಸರದಾರರಾಗಿದ್ರು. ಅಷ್ಟೇ ಅಲ್ಲ, ಒಟ್ಟು 5 ಸಲ ತಮಿಳುನಾಡಿನ ಮುಖ್ಯಮಂತ್ರಿಯಾದ ಹಿರಿಮೆ ಕರುಣಾನಿಧಿಯವರದ್ದು.
ಇವತ್ತು ಕುರಣಾನಿಧಿಯವರು ಕಟ್ಟಿಬೆಳೆಸಿದ ಡಿಎಂಕೆ ಒಂದು ಪ್ರಾದೇಶಿಕ ಪಕ್ಷವಾದ್ರೂ, ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ತಮಿಳುನಾಡು-ಪುದುಚೇರಿಯ ಎಲ್ಲಾ ಲೋಕಸಭಾ ಸ್ಥಾನಗಳನ್ನು ಗೆಲ್ಲುವ ತಾಕತ್ತು ಕರುಣಾನಿಧಿಯವರ ಪಕ್ಷಕ್ಕೆ ಇದೆ. ಅಲ್ಲಿಗೆ ನೀವೇ ಯೋಚ್ನೆ ಮಾಡಿ. ಕರುಣಾನಿಧಿ ಅದೆಂತಾ ಪವರ್ಫುಲ್ ಪೊಲಿಟಿಷಿಯನ್ ಆಗಿದ್ರು ಅಂತ.
ಕರುಣಾನಿಧಿ ತಮಿಳುನಾಡಿನಲ್ಲಿ ಐದು ಸಲ ಸಿಎಂ ಆಗಿದ್ರು. 61 ವರ್ಷಗಳ ಕಾಲ ಪವರ್ಫುಲ್ ಪೊಲಿಟಿಷಿಯನ್ ಅನ್ನಿಸಿಕೊಂಡಿದ್ರು ಅನ್ನೋದು ಒಂದು ತೂಕವಾದ್ರೆ, ಕರುಣಾನಿಧಿಯವರ ಕಾಂಟ್ರೋವರ್ಸಿಗಳದ್ದೇ ಮತ್ತೊಂದು ತೂಕ. ಕರುಣಾನಿಧಿಯ ಕಾಂಟ್ರೋವರ್ಸಿಗಳಲ್ಲಿ ಪ್ರಮುಖ ಪಾತ್ರ ವಹಿಸೋದು ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜೆ. ಜಯಲಲಿತಾ ಅವರು..
ತಮಿಳುನಾಡಿನ ರಾಜಕೀಯ ಇತಿಹಾಸವನ್ನು ಕೆದಕಿ ನೋಡಿದ್ರೆ ಅಲ್ಲಿ ಸಖತ್ ಇಂಟ್ರೆಸ್ಟಿಂಗ್ ಮತ್ತು ಹೈವೋಲ್ಟೇಜ್ ವಾರ್ ಎದ್ದು ಕಾಣೋದು ಜಯಲಲಿತಾ ಮತ್ತು ಕರುಣಾನಿಧಿಯ ಮಧ್ಯೆಯೇ…! ನಿಜ ಹೇಳಬೇಕು ಅಂದ್ರೆ ಕರುಣಾನಿಧಿ ಮತ್ತು ಜಯಲಲಿತಾ ಪರಸ್ಪರ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ರು. ತಮ್ಮ ಪಕ್ಷದ ಗೆಲುವಿಗಾಗಿ ಮತದಾರರಿಗೆ ಬರಪೂರ ಉಡುಗೊರೆಗಳನ್ನು ಕೊಡ್ತಾಯಿದ್ರು. ರಾಜಕೀಯ ಸೇಡನ್ನು ಬೆಳೆಸಿಕೊಂಡು ಒಬ್ಬರನ್ನು ಹಣಿಯೋಕೆ ಮತ್ತೊಬ್ಬರು ಹವಣಿಸುತ್ತಲೇ ಇದ್ರು.
ಅದು 2001 ಜೂನ್ 30. ಮಧ್ಯರಾತ್ರಿ 1.45ರ ಸಮಯ.. ದೇಶದ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಒಂದು ಕರಾಳ ಘಟನೆಯೊಂದು ನಡೆದು ಹೋಗಿತ್ತು. ಅದೇ ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿಯನ್ನು ಅಂದಿನ ಮುಖ್ಯಮಂತ್ರಿ ಜಯಲಲಿತಾ ರಾತ್ರೋ ರಾತ್ರಿ ಅರೆಸ್ಟ್ ಮಾಡಿಸಿದ್ದು. ಈ ವೇಳೆ ಕರುಣಾನಿಧಿಯ ಚೀರಾಟ ಇಡೀ ದೇಶದ ಗಮನ ಸೆಳೆದಿತ್ತು.
ಅವತ್ತು ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ತಮ್ಮ ಮನೆಯಲ್ಲಿ ಸುಖನಿದ್ರೆಗೆ ಜಾರಿದ್ರು. ಈ ವೇಳೆ ಸಡನ್ನಾಗಿ ಎಂಟ್ರಿಕೊಟ್ಟ ಪೊಲೀಸರು 78 ವರ್ಷದ ಕರುಣಾನಿಧಿಯನ್ನು ಅರೆಸ್ಟ್ ಮಾಡಿದ್ರು.. ಆಗ ನನ್ನನ್ನು ಸಾಯಿಸುತ್ತಿದ್ದಾರೆ ಕಾಪಾಡಿ ಕಾಪಾಡಿ ಅಂತ ಕೂಗಿಕೊಂಡ್ರೂ ಕರುಣಾನಿಧಿ ರಕ್ಷಣೆಗೆ ಯಾರೂ ಬಂದಿರ್ಲಿಲ್ಲ. ಪೊಲೀಸರು ಕರುಣಾನಿಧಿಯನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗಿದ್ರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮಾಜಿ ಸಿಎಂ ಒಬ್ಬರನ್ನು ರಾತ್ರೋ ರಾತ್ರಿ ಪೊಲೀಸರು ಅರೆಸ್ಟ್ ಮಾಡಿದ್ದು ಅದೇ ಮೊದಲು. ಹೀಗಾಗಿ ಈ ಘಟನೆ ನಡೆದು 17 ವರ್ಷಗಳೇ ಕಳೆದ್ರೂ ಅದು ಇನ್ನು ಜನಮಾನಸದಿಂದ ದೂರವಾಗಿಲ್ಲ. ಈ ಸುದ್ದಿ ಆಗ ದೇಶದ ಉದ್ದಗಲಕ್ಕೂ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು.
1996 ರಿಂದ 2001ರವರೆಗೆ ತಮಿಳುನಾಡಿನ ಸಿಎಂ ಆಗಿದ್ರು ಕರುಣಾನಿಧಿ. ಆ ವೇಳೆ ಚೆನ್ನೈನಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿಯಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿ ಅವ್ಯವಹಾರ ನಡೆದೆ ಅನ್ನೋ ಆರೋಪ ಅವರ ಮೇಲೆ ಕೇಳಿಬಂದಿತ್ತು. ಹೀಗಾಗಿ 2001ರಲ್ಲಿ ಮತ್ತೆ ಸಿಎಂ ಹುದ್ದೆಗೇರಿದ ಜಯಲಲಿತಾ ತಮ್ಮ ಬದ್ಧವೈರಿ ಕರುಣಾನಿಧಿಯ ಮೇಲೆ ಸೇಡಿನ ರಾಜಕೀಯ ಮುಂದುವರೆಸಿದ್ರು. ಇದ್ರ ಪರಿಣಾಮದಿಂದಾಗಿಯೇ ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ರಾತ್ರೋ ರಾತ್ರಿ ಅರೆಸ್ಟ್ ಆಗಿದ್ದು.
ತ್ರೇತಾಯುಗದಲ್ಲಿ ಶ್ರೀರಾಮ ಇದ್ದ. ಆತ ಅಯೋಧ್ಯೆಯಿಂದ ಸೀತೆಗಾಗಿ ಶ್ರೀಲಂಕಕ್ಕೆ ಹೋಗಿದ್ದ. ಅಲ್ಲಿ ರಾಕ್ಷಸ ರಾವಣನನ್ನು ಸಂಹಾರ ಮಾಡಿದ್ದ ಅಂತಾನೇ ಕೋಟ್ಯಂತರ ಮಂದಿ ನಂಬ್ತಾರೆ. ಇದು ಜನರ ಭಾವನೆಗಳಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯ. ಆದ್ರೆ ಕರುಣಾನಿಧಿ ಮಾತ್ರ ಶ್ರೀರಾಮನ ಬಗ್ಗೆಯೇ ಟೀಕೆ ಮಾಡಿ ಕಾಂಟ್ರೋವರ್ಸಿಯನ್ನು ಮೈಮೇಲೆ ಎಳೆದುಕೊಂಡಿದ್ರು..ಅದು 2007. ಕೇಂದ್ರದಲ್ಲಿ ಮನಮೋಹನ್ಸಿಂಗ್ ನೇತೃತ್ವದ ಯುಪಿಎ ಸರ್ಕಾರವಿತ್ತು. ಯುಪಿಎ ಸರ್ಕಾರಕ್ಕೆ ತಮಿಳುನಾಡಿನಲ್ಲಿ ಸಿಎಂ ಆಗಿದ್ದ ಕರುಣಾನಿಧಿಯವರ ಡಿಎಂಕೆ ಪಕ್ಷ ಬೆಂಬಲ ಸೂಚಿಸಿತ್ತು. ಅಷ್ಟೇ ಅಲ್ಲ, ಕೇಂದ್ರ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ಕೂಡ ಪಡೆದುಕೊಂಡಿತ್ತು ಡಿಎಂಕೆ. ಇದೇ ಸಂದರ್ಭದಲ್ಲಿ ದೇಶದಾದ್ಯಂತ ರಾಮ ಸೇತು ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿತ್ತು. ಈ ವೇಳೆ ಪತ್ರಿಕಾಗೋಷ್ಠಿಯೊಂದರಲ್ಲಿ ಕರುಣಾನಿಧಿಗೆ ರಾಮ ಸೇತು ಬಗ್ಗೆ ಪ್ರಶ್ನೆ ಕೇಳಿಬಂದಿತ್ತು. ಆಗ ಅದಕ್ಕೆ ಉತ್ತರಿಸಿದ್ದ ಕರುಣಾನಿಧಿ ಸಾವಿರಾರು ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ಇದ್ದನಂತೆ. ಅವನ ಹೆಸರು ರಾಮನಂತೆ. ಆತ ನಿರ್ಮಿಸಿದ ಸೇತುವೆಯನ್ನು ಯಾರೂ ಮುಟ್ಟಬಾರದಂತೆ.. ಆದ್ರೆ ನಾನು ಕೇಳುತ್ತೇನೆ. ಈ ರಾಮ ಯಾರು.? ಅವನು ಯಾವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡ್ಕೊಂಡಿದ್ದ..? ಇದಕ್ಕೆ ಏನಾದ್ರೂ ಸಾಕ್ಷ್ಯಾಧಾರಗಳಿವೆಯೇ ಅಂತ ಕರುಣಾನಿಧಿ ಪ್ರಶ್ನಿಸಿದ್ರು….! ಕರುಣಾನಿಧಿಯವರ ಈ ಹೇಳಿಕೆಗಳು ದೇಶದ ಉದ್ದಗಲಕ್ಕೂ ಬೆಂಕಿ ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿತ್ತು. ರಾಜಕೀಯ ವಲಯದಲ್ಲಿ ಕರುಣಾನಿಧಿ ಹೇಳಿಕೆಗೆ ಖಂಡನೆ ವ್ಯಕ್ತವಾಗಿತ್ತು. ಎಲ್ಲ ನ್ಯೂಸ್ ಚಾನೆಲ್ ಮತ್ತು ಸುದ್ದಿ ಪತ್ರಿಕೆಗಳಲ್ಲೂ ಕರುಣಾನಿಧಿಯ ಈ ಹೇಳಿಕೆಯೇ ದೊಡ್ಡ ಚರ್ಚಾ ವಿಷಯವಾಗಿ ಪರಿಣಮಿಸಿತ್ತು.
ಆ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ರಾಮ ಒಬ್ಬ ಕುಡುಕ. ಇದನ್ನು ನಾನು ಹೇಳ್ತಾಯಿಲ್ಲ. ಇದನ್ನು ವಾಲ್ಮೀಕಿಯೇ ರಾಮಾಯಣದಲ್ಲಿ ಬರೆದಿದ್ದಾರೆ. ಅಡ್ವಾಣಿಯವರು ವಾಲ್ಮೀಕಿ ರಾಮಾಯಣವನ್ನು ಓದಬೇಕು ಅಂತ ಹೇಳೋ ಮೂಲಕ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ರು….!
ಶ್ರೀರಾಮನ ಬಗೆಗಿನ ಕರುಣಾನಿಧಿಯವರ ಈ ಟೀಕೆಗಳು ದೇಶದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದವು. ಬಿಜೆಪಿ ನಾಯಕರಂತೂ ಕೆಂಡಾಮಂಡಲರಾಗಿದ್ರು. ಕರುಣಾನಿಧಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಅಂತ ಕೋರ್ಟ್ ಮೆಟ್ಟಿಲು ಏರಿದ್ರು. ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ದೂರು ದಾಖಲಿಸಿದ್ದ ಸುಬ್ರಹ್ಮಣಿಯನ್ ಸ್ವಾಮಿ, ಕರುಣಾನಿಧಿಯವರ ಈ ಟೀಕೆ ಆಧಾರ ರಹಿತ.. ಅವರು ವಾಲ್ಮೀಕಿ ರಾಮಾಯಣವನ್ನು ಓದಿಯೇ ಇಲ್ಲ. ಯಾರೋ ಹೇಳಿದ್ದನ್ನು ಕೇಳಿ ಹೀಗೆ ಟೀಕೆ ಮಾಡುತ್ತಿದ್ದಾರೆ ಅಂತ ಹೇಳಿದ್ರು. ಕರುಣಾನಿಧಿ ಹೇಳಿದ್ದನ್ನು ಪ್ರೂವ್ ಮಾಡೋಕೆ ಆಗಿಲ್ಲ ಅಂದ್ರೆ ಅವರು ರಾಜಕೀಯ ನಿವೃತ್ತಿ ಪಡೆದುಕೊಳ್ತಾರಾ ಅಂತ ಸುಬ್ರಹ್ಮಣಿಯನ್ ಸ್ವಾಮಿ ಪ್ರಶ್ನಿಸಿದ್ರು.
ಹೀಗೆ ಕರುಣಾನಿಧಿ ತಮ್ಮ 61 ವರ್ಷಗಳ ಸುದೀರ್ಘ ರಾಜಕೀಯ ಪಯಣದಲ್ಲಿ 5 ಸಲ ಸಿಎಂ ಆಗಿದ್ರು ಅನ್ನೋದಕ್ಕಿಂತ ಹಲವು ಕಾಂಟ್ರೋವರ್ಸಿಗಳಿಂದಲೇ ಸದಾ ಸುದ್ದಿಯಲ್ಲಿದ್ರು. ಕಾಂಟ್ರೋವರ್ಸಿಗಳಿಂದಲೇ ದೇಶದ ಗಮನ ಸೆಳೆಯುತ್ತಿದ್ರು. ಇಂಥ ಹಿರಿಯ ಮತ್ತು ಪವರ್ಫುಲ್ ರಾಜಕಾರಣಿ ಇನ್ನು ನೆನಪು ಮಾತ್ರ.