ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ . ಕರುಣಾನಿಧಿ ಅವರ ಅಂತ್ಯಕ್ರಿಯೆಯನ್ನು ಮರೀನಾ ಬೀಚ್ ನಲ್ಲೇ ಮಾಡುವ ಅವಾಕಶವನ್ನು ಮದ್ರಾಸ್ ಹೈಕೋರ್ಟ್ ಕಲ್ಪಿಸಿ ತೀರ್ಪು ನೀಡಿದೆ.
ಕರುಣಾನಿಧಿ ಸಮಾಧಿಗೆ ಚೆನ್ನೈನ ಮರೀನಾ ಬೀಚ್ ನಲ್ಲಿ ಜಾಗ ನೀಡಲು ಅಲ್ಲಿ ಆಡಳಿತದಲ್ಲಿರುವ ಎಐಡಿಎಂಕೆ ಸರ್ಕಾರ ನಿರಾಕರಿಸಿತ್ತು. ಮರೀನಾ ಬೀಚ್ ನಲ್ಲೇ ಜಾಗ ನೀಡಬೇಕು ಎಂದು ಡಿಎಂಕೆ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪು ಡಿಎಂಕೆಗೆ ದುಃಖದಲ್ಲಿಯೂ ಜಯ ಸಿಕ್ಕ ಖುಷಿಗೆ ಕಾರಣವಾಗಿದೆ. ಆಡಳಿತ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ.
ಗುರು ಅಣ್ಣಾದೊರೈ ಅವರ ಸಮಾಧಿಯ ಪಕ್ಕದಲ್ಲೇ ಶಿಷ್ಯ ಕರುಣಾನಿಧಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಸರ್ಕಾರ ಸಾವಿನ ಮನೆಯಲ್ಲಿ ರಾಜಕೀಯ ಮಾಡಿರುವುದಕ್ಕೆ ಸರಿಯಾದ ಪಾಠ ಕೋರ್ಟ್ ನಿಂದಾಗಿದೆ. ಸರ್ಕಾರದ ವಿವೇಚನೆ ಬಿಟ್ಟ ವಿಚಾರ ಇದಾಗಿತ್ತು. ಸರ್ಕಾರ ಜನರ ಆಸೆಯಂತೆ ಮೊದಲೇ ಮರೀನಾ ಬೀಚ್ ನಲ್ಲಿ ಅವಕಾಶ ನೀಡಿದ್ದರೆ ಈ ಮುಖಭಂಗ ಅನುಭವಿಸುವ ಅಗತ್ಯ ಇರಲಿಲ್ಲ.
ಮರೀನಾ ಬೀಚ್ ನಲ್ಲೇ ಕರುಣಾನಿಧಿ ಅಂತ್ಯಸಂಸ್ಕಾರಕ್ಕೆ ಅವಕಾಶ
Date: