ತಮಿಳುನಾಡು ಮಾಜಿಮುಖ್ಯಮಂತ್ರಿ ಎಂ .ಕರುಣಾನಿಧಿ ಅವರು ಕೇವಲ ಒಬ್ಬ ರಾಜಕಾರಣಿ ಮಾತ್ರವಲ್ಲ. ಅವರೊಬ್ಬ ಸಾಹಿತಿಯೂ ಹೌದು. ಸಿನಿರಂಗಕ್ಕೂ ಸೇವೆ ಸಲ್ಲಿಸಿದ್ದಾರೆ.
ಇವರ ಬಗ್ಗೆ ಕನ್ನಡದ ಹಿರಿಯ ನಟಿ ಲೀಲಾವತಿ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ಹೇಳುವಂತೆ, 60ವರ್ಷ ತಮಿಳುನಾಡಿನಲ್ಲಿ ತೋಟ ಮಾಡಿಕೊಂಡಿದ್ದರು. ಇಲ್ಲಿ ಶೂಟೌಟ್ ಆಗಿದ್ದಾಗ, ಅಲ್ಲಿನ ಪತ್ರಿಕೆಯಲ್ಲಿ ‘ಪಾಪಾ ಕನ್ನಡದ ಕಲಾವಿದೆ ಲೀಲಾವತಿ ಅವರಿಗೆ ಯಾಕೆ ತೊಂದರೆ ಮಾಡುತ್ತಿದ್ದಾರೆ ಎಂದು ಬರೆದಿದ್ದರಂತೆ ಕರುಣಾನಿಧಿ ಅವರು…!
ಇದನ್ನು ನಾನು ನೋಡಿಲ್ಲ ಕೆಲವರು ನನಗೆ ಬಂದು ಹೇಳಿದ್ದರು ಎಂದು ಲೀಲಾವತಿ ತಿಳಿಸಿದ್ದಾರೆ.
ಜನರನ್ನು ಆಕರ್ಷಿಸುವ ಶಕ್ತಿ ಕರುಣಾನಿಧಿ ಅವರಿಗಿತ್ತು. ತಳ್ಳುವ ಗಾಡಿಯಲ್ಲಿ ಬಂದಾದ್ರೂ ಜನರೊಡನೆ ಇರ್ತಿದ್ರು. ಎಷ್ಟೋ ಮಂದಿ ಸತ್ತಾಗ ಅವರ ಜೊತೆಗೆ ನಾನೂ ಸತ್ತು ಹೋಗುತ್ತಿದ್ದೆ. ಆದರೆ,ಕರುಣಾನಿಧಿ ಅವರನ್ನು ನೋಡಿದಾಗ ನಾನು ಬದುಕಬೇಕು ಎನ್ನುವ ಆಸೆ ಹುಟ್ಟಿದೆ ಎಂದು ಲೀಲಾವತಿ ಹೇಳಿದ್ದಾರೆ. ಎಷ್ಟೇ ಕಷ್ಟವಾದರೂ ವ್ಹೀಲ್ ಚೇರ್ ನಲ್ಲಿ ಬಂದು ಜನರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು. ಕಷ್ಟಪಟ್ಟಾದರೂ ಕೈ ಎತ್ತಿ ಧನ್ಯವಾದ ಸಮರ್ಪಿಸುತ್ತಿದ್ದರು ಎಂದು ಲೀಲಾವತಿ ದುಃಖಿತರಾದರು.