ಇದು ಒಬ್ಬಳೇ ಒಬ್ಬ ಹುಡುಗಿಗಾಗಿ ಚಲಿಸುವ ರೈಲು..! ಜಪಾನ್ ನಲ್ಲಿ ಹುಡುಗಿಯೊಬ್ಬಳಿಗಾಗಿಯೇ ರೈಲೊಂದು ಸಂಚರಿಸುತ್ತೆ..!

Date:

ಕೇವಲ ಒಬ್ಬ ಪ್ಯಾಸೆಂಜರ್ ಗಾಗಿ ಬಸ್, ರೈಲು ಅಥವಾ ಯಾವುದೇ ಸಾರ್ವಜನಿಕ ಸಾರಿಗೆಗಳು ಕಾರ್ಯನಿರ್ವಹಿಸುವುದನ್ನು ನೀವು ಕಂಡಿದ್ದೀರಾ..? ಕೇಳಿದ್ದೀರಾ..? ನಮ್ಮ ಭಾರತದಲ್ಲಿ ದಿನಂಪ್ರತಿ ಸಾವಿರಾರು ಜನರು ಓಡಾಡುವ ರೈಲು ಎಲ್ಲಾದರೂ ಒಬ್ಬನೇ ಒಬ್ಬ ಪ್ಯಾಸೆಂಜರ್ಗೋಸ್ಕರ ಕಾರ್ಯನಿರ್ವಹಿಸಿದೆಯೇ..?! ಆದರೆ ಜಪಾನ್ ನಲ್ಲಿ ಕೇವಲ ಒಬ್ಬಳೇ ಒಬ್ಬಳು ಹುಡುಗಿಗಾಗಿ ದಿನನಿತ್ಯ ರೈಲೊಂದು ಸಂಚರಿಸುತ್ತೆ..!
ಅದು ಜಪಾನಿನ ಉತ್ತರ ಭಾಗದಲ್ಲಿರೊ ಹೊಕ್ಕಾಯ್ಡೋ ದ್ವೀಪದ ಕಮಿ ಶಿರಾಟಕಿ ರೈಲು ನಿಲ್ದಾಣ. ಅಲ್ಲಿ ದಿನನಿತ್ಯ ಪ್ರಯಾಣಿಕರು ಓಡಾಡುವುದೇ ಇಲ್ಲ..! ಯಾವಗಲೋ ಒಮ್ಮೊಮ್ಮೆ ಮಾತ್ರ ಅಲ್ಲಿ ರೈಲೇರಿ ಜನ ಪ್ರಯಾಣಿಸುತ್ತಾರೆ..! ಹೀಗೆ ಯಾವ ಪ್ರಯಾಣಿಕರೂ ಇಲ್ಲ ಅಂತ ಆ ಭಾಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಿ ಜಪಾನ್ ರೈಲ್ವೆ ಅಧಿಕಾರಿಗಳು ಡಿಸೈಡ್ ಮಾಡಿ ಬಿಟ್ಟಿರ್ತಾರೆ..! ಆದರೆ ಅಲ್ಲಿ ಒಬ್ಬಳು ಹುಡುಗಿ ದಿನವೂ ಪ್ರಯಾಣಿಸ್ತಾಳೆ ಅನ್ನೋ ವಿಷಯ ಗೊತ್ತಾಗುತ್ತೆ..! ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದ ಆಕೆ ನಿತ್ಯ ರೈಲಿನಲ್ಲಿ ಅದೇ ಮಾರ್ಗದಿ ರೈಲಿನಲ್ಲಿ ಓಡಾಡ್ತಾ ಇರ್ತಾಳೆ..! ಒಂದು ವೇಳೆ ಪ್ರಯಾಣಿಕರಿಲ್ಲ ಅಂತ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ರೆ ಆ ಹುಡುಗಿಯ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಂತ ರೈಲ್ವೆ ಅಧಿಕಾರಿಗಳು ಅವಳೊಬ್ಬಳಿಗಾಗಿ ಕಮಿ ಶಿರಾಟಕಿಯಲ್ಲಿ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ..! ಕೆಲವು ವರ್ಷಗಳಿಂದ ಇವಳೊಬ್ಬಳಿಗಾಗಿ ರೈಲು ಸಂಚಾರಿಸ್ತಾ ಇದೆ..! ಹುಡುಗಿ ಶಾಲೆಗೆ ಹೋಗುವಾಗ, ಶಾಲೆ ಬಿಟ್ಟು ಮನೆಗೆ ಹೋಗುವ ಸಮಯದಲ್ಲಿ ಮಾತ್ರ ದಿನಕ್ಕೆರಡು ಬಾರಿ ರೈಲು ಸಂಚರಿಸ್ತಾ ಇದೆ..! ಇವಳಿಗಾಗಿಯೇ ವಿಶೇಷವಾದ ರೈಲ್ವೆ ವೇಳಾಪಟ್ಟಿ ಹಾಕಿದ್ದಾರೆ…! ಈ ವರ್ಷ ಮಾರ್ಚ್ ಹೊತ್ತಿಗೆ ಈ ಹುಡುಗಿಯ ಪದವಿ ಶಿಕ್ಷಣ ಮುಗಿದ ಬಳಿಕ ರೈಲು ಸಂಚಾರ ಸ್ಥಗಿತಗೊಳಿಸ್ತಾರಂತೆ..! ಜಪಾನ್ ಶಿಕ್ಷಣಕ್ಕೆ ಎಷ್ಟೊಂದು ಪ್ರಾಶಸ್ತ್ಯ ಕೊಡುತ್ತೆ ಅನ್ನೋದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕಿಲ್ವೇನೋ..!? ಒಬ್ಬಳೇ ಒಬ್ಬ ವಿದ್ಯಾರ್ಥಿನಿಗಾಗಿ ರೈಲು ಕಾರ್ಯ ನಿರ್ವಹಿಸುತ್ತೆ ಅಂದ್ರೆ ಅಚ್ಚರಿಯೇ ಸರಿ..! ಜೊತೆಗೆ ಇದು ಸಂತಸದ ವಿಚಾರವೂ ಹೌದು.

 

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ದಾನ ಮಾಡುವುದರಲ್ಲಿ ಅಜೀಂ ಪ್ರೇಮ್ ಜಿ ನಂ 1..! ಎರಡನೇ ಸ್ಥಾನದಲ್ಲಿದ್ದಾರೆ ಕರ್ನಾಟಕದ ಉದ್ಯಮಿ..!

ಆ ಫೇಸ್ ಬುಕ್ ಪುಟ ಅಷ್ಟೊಂದು ವೈರಲ್ ಆಗಿದ್ದೇಕೆ ಗೊತ್ತಾ..!

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?

ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!

6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!

ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...