ಮಗುವಿಗೆ ಹಾಲುಣಿಸುತ್ತಿದ್ದ ಮಹಿಳೆಗೆ ಸ್ತನ ಮುಚ್ಚಿಕೋ ಎಂದ ಆತನಿಗೆ ಆಕೆ ಕೊಟ್ಟ ಉತ್ತರ ಹೀಗಿತ್ತು…!

Date:

ಸಾರ್ವಜನಿಕ ಸ್ಥಳದಲ್ಲಿ ತನ್ನ ಮಗುವಿಗೆ ಎದೆ ಹಾಲು ಉಣಿಸುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಸ್ತನ ಮುಚ್ಚಿಕೋ ಎಂದಿದ್ದಾನೆ. ಆಗ ಆಕೆ ಮುಖ ಮುಚ್ಚಿಕೊಂಡಿದ್ದಾರೆ…!

ಈ ಘಟನೆ ನಡೆದಿರುವುದು ಮೆಕ್ಸಿಕೋದ ಕ್ಯಾಬೋ ಸನ್ ಲುಕಾಸ್ ನಲ್ಲಿ. ಮೆಲಾನಿ ಡ್ಯೂಡ್ಲಿ ಎಂಬಾಕೆ ತನ್ನ ನಾಲ್ಕು ತಿಂಗಳ ಮಗುವಿಗೆ ಎದೆ ಹಾಲು ಉಣಿಸುತ್ತಿದ್ದರು.‌ಆಗ ಅಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಸ್ತನ‌ ಮುಚ್ಚಿಕೋ ಎಂದು ಸಲಹೆ ನೀಡಿದ್ದಾನೆ.
ಅವನ ಮಾತಿಗೆ ಪ್ರತಿಕ್ರಿಯಿಸದೇ ಮೆಲಾನಿ ಸ್ತನ ಮುಚ್ಚಿಕೊಳ್ಳುವ ಬದಲು ತನ್ನ ಮುಖವನ್ನು ಮುಚ್ಚಿಕೊಂಡಿದ್ದಾರೆ…! ಈ ವೇಳೆ ಮೆಲಾನಿ ಜೊತೆಗಿದ್ದ ವ್ಯಕ್ತಿಯೊಬ್ಬ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ…!

A friend’s daughter-in-law was told to “cover up” while feeding her baby, so she did!? I’ve never met her, but I think…

Posted by Carol Lockwood on Monday, July 30, 2018

ನನ್ನ ಸ್ನೇಹಿತನ ಸೊಸೆ ತನ್ನ ಮಗುವಿಗೆ ಸ್ತನಪಾನ ಮಾಡಿಸುತ್ತಿದ್ದರು. ಆಗ ಅಲ್ಲಿದ್ದ ವ್ಯಕ್ತಿಯೊಬ್ಬ ಆಕೆಗೆ ತನ್ನ ಸ್ತನವನ್ನು ಮುಚ್ಚಿಕೊಳ್ಳುವಂತೆ ಸಲಹೆ ನೀಡಿದ್ದನು. ಆ ವ್ಯಕ್ತಿಯ ಮಾತಿಗೆ ಮೆಲಾನಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅವರನ್ನು ಎಂದಿಗೂ ಭೇಟಿ ಆಗಿಲ್ಲ. ಆದರೆ ಅವರು ಅದ್ಭುತ ಎಂದು ನನಗೆ ಅನಿಸುತ್ತಿದೆ ಎಂದು ಮೆಲಾನಿ ಕುಟುಂಬದ ಆಪ್ತ ಕಾರೋಲ್ ಲಾಕ್‍ವುಡ್ ಫೋಟೋ ಹಾಕಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಾನು ರಜೆ ಕಳೆಯಲು ನನ್ನ ಇಡೀ ಕುಟುಂಬದ ಜೊತೆ ಕ್ಯಾಬೋ ಸನ್ ಲುಕಾಸ್ ಗೆ ಹೋಗಿದ್ದೇವು. ಆಗ ಅಲ್ಲಿದ್ದ ವ್ಯಕ್ತಿಯೊಬ್ಬ ನನ್ನ ಸ್ತನ ಮುಚ್ಚಿಕೋ ಎಂದು ಸಲಹೆ ನೀಡಿದ್ದನು. ಆಗ ನಾನು ನನ್ನ ದುಪಟ್ಟಾದಿಂದ ನನ್ನ ಮುಖವನ್ನು ಮುಚ್ಚಿಕೊಂಡೆ. ಆದರೆ ರೆಸ್ಟೋರೆಂಟ್‍ನಲ್ಲಿ ನಾವು ಹಿಂದಿನ ಸೀಟ್‍ನಲ್ಲಿ ಕುಳಿತ್ತಿದ್ದೇವು ಎಂದು ಮೆಲಾನಿ ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...

ಮಧುಮೇಹಿಗಳಿಗೆ ಲವಂಗದ ನೀರು ವರದಾನ

ಮಧುಮೇಹಿಗಳಿಗೆ ಲವಂಗದ ನೀರು ವರದಾನ: ಬೆಳಿಗ್ಗೆ ಈ ನೀರು ಕುಡಿಯುವುದರಿಂದ ಬ್ಲಡ್...

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ! ಬೆಂಗಳೂರು: ಬಾಗಲಗುಂಟೆ...

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...