ತೆಲುಗು ಸೂಪರ್ ಸ್ಟಾರ್ ನಾಗರ್ಜುನ್ ಕನ್ನಡ ಸಿನಿಮಾ ಮಾಡೋಕೆ ರೆಡಿ ಇದ್ದಾರೆ….! ಆದರೆ, ಕನ್ನಡದ ಈ ಸ್ಟಾರ್ ನಟ ಕರೆಯಬೇಕಷ್ಟೇ…!
ಬೆಂಗಳೂರಿನ ಮಾರತಹಳ್ಳಿಯಲ್ಲಿ ಆರಂಭವಾದ ಮಳೆಗೆಯೊಂದರ ಉದ್ಘಾಟನೆಗೆ ಆಗಮಿಸಿದ್ದ ಅವರು ಕನ್ನಡ ಸಿನಿಮಾ ಮಾಡೋ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸಹ ಭಾಗವಹಿಸಿದ್ದರು. ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಮಾತನಾಡಿದ ನಾಗಾರ್ಜುನ್, ಶಿವಣ್ಣ ಕರೆದರೆ ತಕ್ಷಣ ಬಂದು ಬಿಡ್ತೀನಿ. ಒಂದು ಅದ್ಭುತವಾದ ಕಥೆ ಸಿಕ್ಕರೆ ಖಂಡಿತಾ ಸಿನಿಮಾ ಮಾಡ್ತೀನಿ. ಶಿವಣ್ಣ ಅವರ ಜೊತೆಯಲ್ಲಿ ಅಂದರೆ ಈಗ ಕರೆದರೂ ನಾನು ನಟಿಸುತ್ತೇನೆ. ನಾನು ಡಾ. ರಾಜ್ ಕುಮಾರ್ ಅವರ ಆ್ಯಕ್ಟಿಂಗ್ ನೋಡಿದ್ದೇನೆ. ಅವರು ನನ್ನ ಅಭಿನಯ ನೋಡಿ ಮೆಚ್ಚಿ ಪೋನ್ ಮಾಡಿದ್ದರು ಎಂದು ನಾಗಾರ್ಜುನ್ ಹೇಳಿದ್ದಾರೆ.
’ನಾಗಾರ್ಜುನ್ ಜೊತೆ ಸಿನಿಮಾ ಮಾಡಲು ಒಂದು ಒಳ್ಳೆಯ ಸ್ಕ್ರಿಪ್ಟ್ ಬೇಕು. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಖಂಡಿತಾ ಇಬ್ಬರೂ ಒಟ್ಟಿಗೆ ನಟಿಸ್ತೀವಿ. ಕನ್ನಡ ಮತ್ತು ತೆಲುಗು ಎರಡಲ್ಲೂ ಸಿನಿಮಾ ಮಾಡಬಹದು ಎಂದು ಶಿವಣ್ಣ ಹೇಳಿದರು