ರೈತರ ಋಣ ತೀರಿಸಲು ನಾನು ಸದಾ ಬದ್ಧನಾಗಿರುತ್ತೇನೆ. ಗೌರಿ-ಗಣೇಶ ಹಬ್ಬದೊಳಗೆ ನಾಡಿನ ಆರುವರೆ ಕೋಟಿ ಜನರಿಗೂ ಸಿಹಿ ಸುದ್ದಿ ನೀಡ್ತೀನಿ ಎಂದು ಮುಖ್ಯಮಂತ್ರಿ ಎಚ್ .ಡಿ ಕುಮಾರ ಸ್ವಾಮಿ ಹೇಳಿದ್ದಾರೆ.ಮಂಡ್ಯದ ಸೀತಾಪುರದಲ್ಲಿ ಭತ್ತ ನಾಟಿ ಮಾಡಿ ಮಾತನಾಡಿದ ಅವರು, ನಾನು ಸಹ ರೈತ ಕುಟುಂಬದಲ್ಲೇ ಹುಟ್ಟಿದವನು. ನಾಟಿ ಮಾಡುವುದು ನಂಗೆ ಹೊಸತಲ್ಲ. ಇದನ್ನು ರಾಜಕೀಯವಾಗಿ ತೆಗೆದುಕೊಂಡರೆ ನಾನೇನು ಮಾಡಲಾಗಲ್ಲ ಎಂದರು.
ರಾಜ್ಯದ 30 ಜಿಲ್ಲೆಗಳನ್ನು ದತ್ತು ತೆಗೆದುಕೊಂಡು ನಾನು ಕೆಲಸ ಮಾಡುತ್ತೇನೆ.ರೈತರನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ, ರೈತರ ಸಮಸ್ಯೆಗೆ ವಿಧಾನಸೌಧದ ಬಾಗಿಲು ಸದಾ ತೆರೆದಿರುತ್ತದೆ, ನಾನು ನಿಮ್ಮ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇನೆ, ಮಂಡ್ಯ ಜಿಲ್ಲೆ ರೈತರ ಋಣ ನನ್ನ ಮೇಲೆ ಅಪಾರವಾಗಿದೆ, ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಿಸಿದ್ದೀರಿ, ಏಳೇಳು ಜನ್ಮಕ್ಕೂ ಮಂಡ್ಯದ ಜನರ ಋಣ ತೀರಿಸಲಾಗದು, ಮಂಡ್ಯದ ಅಭಿವೃದ್ಧಿಯಾಗಬೇಕು ಎಂಬುದು ನನ್ನ ಬಯಕೆ ಎಂದರು