ಭಾರತದಲ್ಲಿ ಮಿಂಚಿದ್ದ ಆಟಗಾರ ಅಮೆರಿಕ ರಾಷ್ಟ್ರೀಯ ತಂಡ ಸೇರಿದ್ದು ಹೇಗೆ?
ಟೀಂ ಇಂಡಿಯಾದ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್ ಅವರ ಟೀಮ್ ಮೇಟ್ , ಭಾರತದ ಪರ ದೇಶಿ ಕ್ರಿಕೆಟ್ ನಲ್ಲಿ ಮಿಂಚಿದ್ದ ಆಟಗಾರ ಈಗ ಅಮೆರಿಕ ತಂಡದಲ್ಲಿದ್ದಾರೆ.
2010ರ ಅಂಡರ್ 19ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಸೌರಭ್ ನೇತ್ರವಲ್ಕರ್ ಅಮೆರಿಕ ಪರ ಕ್ರಿಕೆಟ್ ಆಡ್ತಿರೋ ಭಾರತೀಯ.
ಸೌರಭ್ ಮುಂಬೈನ ಮಾಜಿ ಪೇಸರ್. ಭಾರತದಲ್ಲಿ 18 ದೇಶಿಯ ಪಂದ್ಯಗಳನ್ನು ಆಡಿದ್ದಾರೆ. 25 ವಿಕೆಟ್ ಪಡೆದಿದ್ದಾರೆ. 2013ರಲ್ಲಿ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಕ್ಕೆ ಹೋದ್ರು. ಬಳಿಕ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಅಮೆರಿಕಾದಲ್ಲಿಯೇ ವೃತ್ತಿ ಜೀವನ ಆರಂಭಿಸಿದರು.
ಮತ್ತೆ ವೃತ್ತಿಪರ ಕ್ರಿಕೆಟಿಗನಾಗಬೇಕು ಎಂದು ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಅಭ್ಯಾಸ ಪುನರಾರಾಂಭಿಸಿದರು. ಕಳೆದ ಎರಡು ವರ್ಷಗಳಿಂದ ಅಮೆರಿಕ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸದ್ಯ ಕೆರಬಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.