ಸೆಪ್ಟೆಂಬರ್ 11 ಎಂದೊಡನೆ ಇಡೀ ವಿಶ್ವ ಒಮ್ಮೆ ಅಮೇರಿಕಾದತ್ತ ತಿರುಗಿ ನೋಡುತ್ತೆ..! ವರ್ಲ್ಡ್ ಟ್ರೇಡ್ ಸೆಂಟರ್ ನ ಎರಡು ಕಟ್ಟಡಗಳು ಉಗ್ರರ ದಾಳಿಗೆ ಹೊತ್ತಿ ಉರಿದಿದ್ದು ಅವತ್ತೇ..! ಅದು 2001ರ ಸೆಪ್ಟೆಂಬರ್11. ಅದು ಒಂದು ಕರಾಳ ನೆನಪು..! ಆದರೆ ಅದಕ್ಕೂ 108 ವರ್ಷಗಳ ಮೊದಲು ಇಡೀ ಅಮೇರಿಕಾ ಭಾರತಕ್ಕೆ ತಲೆಬಾಗಿತ್ತು..! ಅದಕ್ಕೆ ಕಾರಣ ಒಬ್ಬನೇ ಒಬ್ಬ ಭಾರತದ ಧೀಮಂತ ನಾಯಕ..! ಓರ್ವ ಮಹಾನ್ ಸನ್ಯಾಸಿ..!
ಹೌದು, ನಿಮಗೆಲ್ಲಾ ಗೊತ್ತಿರುವಂತೆಯೇ ಅದು 1893ರ ಸೆಪ್ಟೆಂಬರ್ 11..! ಅವತ್ತು ತನ್ನ ಭಾಷಣದ ಮೋಡಿಯಿಂದ ಅಮೇರಿಕನ್ನರನ್ನು ಮಂತ್ರಮುಗ್ದಗೊಳಿಸಿದ್ದು ಸ್ವಾಮಿ ವಿವೇಕನಂದಾ ಎಂಬ ಮಹಾಚೇತನ..!
ನೋಡಿ, 2001ರ ಸೆಪ್ಟೆಂಬರ್ 11 ರoದು ಕ್ರೂರಿ ಲಾಡೆನ್ ತನ್ನ ದುಷ್ಟತನದಿಂದ ಕೆಡವಿದ್ದು ಕೇವಲ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳನ್ನು ಮಾತ್ರ..! ಆದರೆ ಅದಕ್ಕೂ ಹಲವಾರು ವರ್ಷಗಳ ಹಿಂದೆಯೇ ನಮ್ಮ ವಿವೇಕಾನಂದರು ವೇದಿಕೆಯ ಮೇಲೆ ನಿಂತು ತಮ್ಮ ಮಾತಿನಿಂದಲೇ ಇಡೀ ಅಮೇರಿಕನ್ನರ ಒಳಮನಸ್ಸನ್ನೇ ಒಂದು ಕ್ಷಣ ಅಲುಗಾಡಿಸಿ ಬಿಟ್ಟಿದ್ದರು..! ಅವತ್ತು ವಿಶ್ವದ ಬೇರೆ ಬೇರೆ ರಾಷ್ಟ್ರದ ಜ್ಞಾನಿಗಳು, ಪಂಡಿತರು, ಮಹಾನ್ ವ್ಯಕ್ತಿಗಳು, ನಾನಾ ಧರ್ಮೀಯರೂ ತಲೆದೂಗಿದರು..! ಸಹನೆ, ಪ್ರೀತಿ, ಜ್ಞಾನ, ಪಾಂಡಿತ್ಯ ಕ್ರೌರ್ಯಕ್ಕಿಂತ ಎಷ್ಟೊಂದು ಶ್ರೇಷ್ಠ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ..?!
ಇತಿಹಾಸದ ಒಂದೇ ದಿನಾಂಕದಂದು, 108 ವರ್ಷಗಳ ಅಂತರದಲ್ಲಿ ನಡೆದ ಎರಡು ಘಟನೆಗಳ ಪರಿಣಾಮವೂ ಎಷ್ಟೊಂದು ವಿಭಿನ್ನ..!? ಒಂದು ಘಟನೆಯ ನಂತರ ಅಮೆರಿಕಾ ಲಾಡೆನ್ನ ಸಾಮ್ರಾಜ್ಯವನ್ನು ಇನ್ನಿಲ್ಲದಂತೆ ಮಾಡಿದರೆ, ಇನ್ನೊಂದು ಘಟನೆಯಲ್ಲಿ ವಿವೇಕಾನಂದರ ಅರ್ಥಗರ್ಭಿತ ಮಾತಿಗೆ ಓಗೊಟ್ಟ ಅಮೇರಿಕಾ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳು ಭಾರತದ ಸೇವೆಗೆ ಸದಾ ಸಿದ್ಧರೆಂದು ಭಾರತಕ್ಕೆ ತಮ್ಮ ಬೆಂಬಲ ನೀಡಿದವು..!
ಅವತ್ತು ಪರಕೀಯರ ಕೈಕೆಳಗಿದ್ದ ನಮ್ಮ ದೇಶವನ್ನು ಪ್ರತಿನಿಧಿಸಿದ ವಿವೇಕಾನಂದರು ಚಿಕಾಗೋದಲ್ಲಿ ವಿಶ್ವಧರ್ಮ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿ ಅಲ್ಲಿ ತನ್ನ ಮಾತಿನಿಂದ ರಾಜ್ಯಭಾರ ಮಾಡಿದ್ದು ಸಾಧರಣ ಸಂಗತಿಯಂತೂ ಅಲ್ಲವೇ ಅಲ್ಲ..!
ವಿವೇಕಾನಂದರು ಭಾರತೀಯ ಸಂಸ್ಕೃತಿ, ಹಿರಿಮೆಯನ್ನು ಎಳೆ ಎಳೆಯಾಗಿ ವಿಶ್ವಧರ್ಮ ಸಮ್ಮೇಳನದಲ್ಲಿ ಬಿಚ್ಚಿಟ್ಟರು. ನಮ್ಮ ದೇಶ, ಧರ್ಮ, ಸಂಸ್ಕೃತಿ, ಪರಂಪರೆಯನ್ನು ಎತ್ತಿ ಹಿಡಿಯುವ ಯಾವ ಸಂದರ್ಭದಲ್ಲೂ ಬೇರೆ ಧರ್ಮಕ್ಕೆ ಅವಮಾನ ಮಾಡಿದವರಲ್ಲ ನಮ್ಮ ವಿವೇಕಾನಂದರು..!
ಅಂದು ವಿವೇಕಾನಂದರ ಭಾಷಣ ನಡೆದ ಮಾರನೇ ದಿನಾ ಅಮೇರಿಕಾದ ಪತ್ರಿಕೆಗಳ ಮುಖಪುಟದಲ್ಲೇ ವಿವೇಕಾನಂದರ ಆ ಭಾಷಣದ ಸುದ್ದು ದಪ್ಪನೆಯ ಅಕ್ಷಗಳಲ್ಲಿ ಮೂಡಿ ಬಂದಿತ್ತು..! ಎಲ್ಲಾ ಪತ್ರಿಕೆಗಳೂ ಹೊಗಳಿ ಬರೆದವು. ಒಂದು ಪತ್ರಿಕೆಯಂತೂ “ಇಂತಹ ಭವ್ಯ ಪರಂಪರೆಯನ್ನು ಹೊಂದಿರುವ ಭಾರತ ದೇಶಕ್ಕೆ ಕ್ರೈಸ್ತ ಮತ ಪ್ರಚಾರಕ್ಕೆ ಕಳಿಸೋದು ನಮ್ಮ ಮೂರ್ಖತನ” ಎಂದು ಸಂಪಾದಕೀಯವನ್ನೇ ಬರೆದಿತ್ತು..!
ವಿವೇಕಾನಂದರ ಬಗ್ಗೆ ಮಾತಾಡ್ತಾ ಜರ್ಮನಿಯ ಥಾಮಸ್ ಕುಕ್ ಹೇಳ್ತಾರೆ ““ಅಂದೊಮ್ಮೆ ಅವರ ಕೈ ಕುಲಿಕಿದ ಬಳಿಕ ಅವರ ಪ್ರೇಮದ ಸ್ಪರ್ಷ ಆರದಿರಲೆಂದು ಮೂರು ದಿನ ಕೈ ತೊಳೆದು ಕೊಂಡಿರ್ಲಿಲ್ಲ”..! ಅಷ್ಟೇ ಏಕೆ..? ರಕ್ ಫೆಲ್ಲರಂಥವರೂ ವಿವೇಕಾನಂದರ ಕಾಲಿಗೆ ಬಿದ್ದಿದ್ದರು..! ಅಮೇರಿಕಾದ ಬೀದಿ ಬೀದಿಗಳಲ್ಲೂ ವಿವೇಕನಂದರ ಕಟೌಟ್ ಆಕಾಶಕ್ಕೆ ಮುತ್ತಿಕ್ಕುತ್ತಿತ್ತು ಅಷ್ಟಾದರೂ ವಿವೇಕಾನಂದರೂ ಬೀಗಲಿಲ್ಲ..!
ವಿವೇಕಾನಂದರೆಂದರೆ ಇಷ್ಟೇ ಅಲ್ಲ..! ಅವರ ಬಗ್ಗೆ ಹೇಳ ಹೊರಟರೆ ಮುಗಿಯದದು ಪದಗಳ ಸಾಲು..! ಇಂದು ಈ ನಮ್ಮ ಮಹಾನ್ ವೀರ ಸನ್ಯಾಸಿಯ ಜನ್ಮದಿನ. ಯುವ ಶಕ್ತಿಯನ್ನು ಬಡಿದೆಬ್ಬಿಸಿದ ಮಹಾನ್ ವ್ಯಕ್ತಿಯ ಜನ್ಮದಿನ ರಾಷ್ಟ್ರೀಯ ಯುವ ದಿನ..! ಎಲ್ಲರಿಗೂ ರಾಷ್ಟ್ರೀಯ ಯುವದಿನದ ಶುಭಾಶಯಗಳು. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ..!
- ಶಶಿಧರ ಡಿ ಎಸ್ ದೋಣಿಹಕ್ಲು
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!
ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!
ಅವಳು ಪ್ರೀತಿಸಿದ್ಲು, ಅವನು ಸುಮ್ಮನಿದ್ದ..! ಅವರು ಸತ್ತೇ ಹೋದ್ರು…!
ತರ್ಲೆ ನನ್ಮಕ್ಳು ಬತ್ತಾವ್ರೆ…! ಎದ್ದೂಬಿದ್ದೂ ನಗೋಕೆ ರೆಡಿ ಆಗ್ರಪ್ಪ..!
ದಾನ ಮಾಡುವುದರಲ್ಲಿ ಅಜೀಂ ಪ್ರೇಮ್ ಜಿ ನಂ 1..! ಎರಡನೇ ಸ್ಥಾನದಲ್ಲಿದ್ದಾರೆ ಕರ್ನಾಟಕದ ಉದ್ಯಮಿ..!
ಆ ಫೇಸ್ ಬುಕ್ ಪುಟ ಅಷ್ಟೊಂದು ವೈರಲ್ ಆಗಿದ್ದೇಕೆ ಗೊತ್ತಾ..!