ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಗೆ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಭಾವುಕರಾಗಿದ್ದಾರೆ.
ವಾಜಪೇಯಿ ಅವರನ್ನು ಕಳೆದುಕೊಂಡಿರುವುದು ನನ್ನ ತಂದೆಯನ್ನೇ ಕಳೆದುಕೊಂಡಂತಾಗಿದೆ ಎಂದು ಮಂಗೇಶ್ಕರ್ ಹೇಳಿದ್ದಾರೆ.
ಅಟಲ್ ಜಿಯವರು ಯಾವಗಲೂ ನನ್ನನ್ನು ಭೇಟಿ ಎಂದು ಕರೆಯುತ್ತಿದ್ದರು. ನಾನು ಅವರನ್ನು ದಾದಾ ಎಂದು ಕರೆಯಿತ್ತಿದ್ದೆ. ಅವರ ಅಗಲಿಕೆಯಿಂದಾಗಿ ನಾನು ಮತ್ತೊಮ್ಮೆ ನನ್ನ ತಂದೆಯನ್ನೇ ಕಳೆದುಕೊಂಡಂತಾಗಿದೆ ಎಂದು ಕಂಬನಿ ಮಿಡಿದರು.

ನನ್ನ ತಂದೆ ಪಂಡಿತ್ ದಿನನಾಥ್ ಮಂಗೇಶ್ಕರ್ ಅವರೊಂದಿಗೆ ವಾಜಪೇಯಿ ಅವರು ಹೆಚ್ಚಿನ ಒಡನಾಟ ಹೊಂದಿದ್ದರು ಎಂದು ಸ್ಮರಿಸಿದರು.






