ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಕಂಬನಿ ಮಿಡಿದಿದ್ದಾರೆ.
ವಾಜಪೇಯಿ ಅವರ ನಿಧನದಿಂದ ನಾನು ನನ್ನ ಬಾಲ್ಯದ ಭಾಗವನ್ನು ಕಳೆದುಕೊಂಡಿದ್ದೇನೆ ಎಂದು ಶಾರುಖ್ ಹೇಳಿದ್ದಾರೆ.
ದೆಹಲಿಯಲ್ಲಿ ವಾಜಪೇಯಿ ಅವರ ಭಾಷಣ ಇದ್ದಾಗ ನನ್ನ ತಂದೆ ತಪ್ಪದೇ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ಭಾಷಣ ಕೇಳುತ್ತಾ ಅವರನ್ನು ನೋಡುತ್ತಾ ನಾನು ಬೆಳೆದೆ.
For The Poet Prime Minister of our country, love you Baapji…https://t.co/IKTYouMdiy pic.twitter.com/kLO4JAHvNu
— Shah Rukh Khan (@iamsrk) August 16, 2018
ವರ್ಷಗಳು ಕಳೆದ ಮೇಲೆ ಅವರ ಜೊತೆ ಕಾಲ ಕಳೆಯುವ ಅವಕಾಶ ದೊರೆಯಿತು, ಆ ವೇಳೆ ನಾನು ಮತ್ತು ಅವರು ಕವಿತೆ, ಸಿನಿಮಾ, ರಾಜಕೀಯ ಹಾಗೂ ನಮ್ಮ ಮಂಡಿನೋವಿನ ಬಗ್ಗೆ ಮಾತನಾಡುತ್ತಿದ್ದೆವು. ಅವರ ಕವಿತೆಯೊಂದಕ್ಕೆ ನಟನೆ ಮಾಡುವ ಅವಕಾಶ ಕೂಡ ಸಿಕ್ಕತು.
ವಾಜಪೇಯಿ ಅವರನ್ನು ಬಾಪ್ ಜೀ ಎಂದು ಕರೆಯಲಾಗುತ್ತಿದ್ದೆವು. ದೇಶ ಅತಿ ದೊಡ್ಡ ನಾಯಕನನ್ನು ಕಳೆದು ಕೊಂಡಿದೆ. ವಯಕ್ತಿಕವಾಗಿ ನಾನು ನನ್ನ ಬಾಲ್ಯಕಳೆದುಕೊಂಡಿದ್ದೇನೆ, ಅವರ ನಗುಮೊಗವನ್ನು ನೋಡುತ್ತಾ ಹಾಗೂ ಅವರ ಕವಿತೆಗಳನ್ನು ಓದುತ್ತಾ ನಾನು ಬೆಳೆದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.






