ಮಳೆಯ ರೌದ್ರಾವತಾರಕ್ಕೆ ಕೇರಳ ಸಂಪೂರ್ಣ ನಲುಗಿದೆ. ಮಳೆಯಿಂದಾಗಿ ಕೇವಲ 24ಗಂಟೆಗಳಲ್ಲಿ 106 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 173ಕ್ಕೆ ಏರಿದೆ.
ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ಮಾಹಿತಿ ಪ್ರಕಾರ ಗುರುವಾರದ ವೇಳೆಗೆ ಕೇರಳದಲ್ಲಿ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಎನ್ ಟಿ ಆರ್ ಎಫ್ ನ ಪರಿಷ್ಕೃತ ಮಾಹಿತಿಯಂತೆ ಗುರುವಾರ ರಾತ್ರಿ ವೇಳೆಗೆ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಆಪತ್ತಿನಲ್ಲಿರುವವರ ರಕ್ಷಣೆಗಾಗಿ ಭಾರತೀಯ ಸೇನೆಯ ವಾಯುದಳ, ಕಾಲ್ದಳ, ನೌಕಾದಳಗಖ ಸಿಬ್ಬಂದಿ ನಿರಂತರ ಶ್ರಮವಹಿಸುತ್ತಿದ್ದರೂ ಸಾವಿನ ಸಂಖ್ಯೆ ಏರಿಕೆ ಆಗುತ್ತಲೇ ಇದೆ.






