ದಾವಣಗೆರೆಯಲ್ಲಿ ಅಭಿಮಾನಿಯೊಬ್ಬರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಫೋಟೋವನ್ನು ದೇವರ ಕೋಣೆಯಲ್ಲಿಟ್ಟು ಪೂಜೆ ಸಲ್ಲಿಸಿದ್ದಾರೆ.
ಅಜಾತಶತ್ರು ಅಟಲ್ ಜಿ ಅವರು, ವಿಧಿವಶರಾದ ಹಿನ್ನೆಲೆಯಲ್ಲಿ ದಾವಣಗೆರೆಯ ಬಿಜೆಪಿ ಕಾರ್ಯಕರ್ತ ಕಡ್ಲೆ ಬಾಳು ಧನಂಜಯ್ ತಮ್ಮ ಮನೆಯ ದೇವರಣ ಕೋಣೆಯಲ್ಲಿ ಅಟಲ್ ಜೀ ಅವರ ಫೋಟೋ ಇಟ್ಟು ಪೂಜೆ ಮಾಡಿದ್ದಾರೆ .

ಧನಂಜಯ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಅಪ್ಪಟ ಅಭಿಮಾನಿ. ಇಹಲೋಕದ ಯಾತ್ರೆ ಮುಗಿಸಿದ ಅವರನ್ನು ದೇವರ ಸ್ಥಾನದಲ್ಲಿಟ್ಟು, ದೇವರಂತೆಯೇ ಕಂಡು ಪೂಜೆ ಮಾಡಿದ್ದಾರೆ.






