ಮಳೆಯ ರುದ್ರ ನರ್ತನಕ್ಕೆ ಕೊಡಗು ಅಕ್ಷರಶಃ ನಲುಗಿದೆ. ಅನೇಕ ಕುಟುಂಬಗಳು ಸಂಕಷ್ಟದಲ್ಲಿವೆ. ಅವರ ರಕ್ಷಣೆ ಕಾರ್ಯ ನಡೆಯುತ್ತಿದೆ.
ಈ ನಡುವೆ ನಟಿ ದಿಶಾಪೂವಯ್ಯ ಅವರ ಕುಟುಂಬ ಸಹ ಪ್ರವಾಹದ ಸುಳಿಗೆ ಸಿಲುಕಿದ್ದು, ರಕ್ಷಣೆಗೆ ಅಂಗಲಾಚುತ್ತಿದೆ.

ದಿಶಾ ಕುಟುಂಬ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ದಿಶಾ ಅವರು ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ, ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇವರ ಕುಟುಂಬದಲ್ಲಿ ಗರ್ಭಿಣಿ ಸಹ ಇದ್ದು, ವೈದ್ಯರು ಈ ವಾರ ಹೆರಿಗೆ ದಿನಾಂಕ ಕೊಟ್ಟಿದ್ದಾರಂತೆ. ಮಡಿಕೇರಿಯ ಮುಕ್ಕೊಡ್ಲುವಿನಲ್ಲಿ ಇವರ ಕುಟುಂಬ ಇದೆ.






