ಕಷ್ಟದಲ್ಲಿ ದುಡ್ಡು ನೀಡಿ ಸಹಾಯ ಮಾಡಿದವರನ್ನು ಸ್ಮರಿಸಿಕೊಳ್ಬೇಕು. ಸಾಲ ಕೊಟ್ಟವರಿಗೆ ಸಾಲ ವಾಪಸ್ ಕೊಟ್ಟು ವ್ಯವಹಾರ ನೆಟ್ಟಗೆ ಇಟ್ಕೋ ಬೇಕು. ಆದರೆ, ಇಲ್ಲೊಬ್ಬ ಆಸಾಮಿ ಸಾಲ ವಾಪಸ್ ಕೇಳಿದ್ದಕ್ಕೆ ಅವರ ಬೆರಳನ್ನೇ ಕಟ್ ಮಾಡಿದ್ದಾನೆ…!
ಬೆಂಗಳೂರಿನ ಕೆ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರೌಡಿಶೀಟರ್ ಮಹಮ್ಮದ್ ಇಸಾಕ್ ಆರೋಪಿ. ಈತ ಫೈಜುಲ್ಲಾ ಎಂಬುವವರಿಂದ ಸಾಲ ತಗೊಂಡಿದ್ದ.
ಇಸಾಕ್ ನಿನ್ನ ಸಾಲ ವಾಪಸ್ಸು ಕೊಡ್ತೀನಿ ಬಾ ಎಂದು ಫೈಜುಲ್ಲಾ ಅವರನ್ನು ಎಚ್ ಬಿ ಆರ್ ಲೇಔಟ್ ನ ‘ಫಸ್ಟ್ ಡ್ರೈವ್ ಸೆಕೆಂಡ್’ ಅನ್ನೋ ಶೋ ರೂಂಗೆ ಕರೆಸಿಕೊಂಡಿದ್ದ. ಬಳಿಕ ಹಲ್ಲೆ ನಡೆಸಿ ಫೈಜುಲ್ಲಾ ಅವರ ಎರಡೂ ಕೈಗಳ ಹೆಬ್ಬೆರಳುಗಳನ್ನು ಕತ್ತರಿಸಿ ಪರಾರಿಯಾಗಿದ್ದಾನೆ. ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.