ಪ್ರತಿಭೆ ನಮ್ಮನ್ನು ಎಷ್ಟೋ ಎತ್ತರಕ್ಕೆ ಕೊಂಡೊಯ್ಯುತ್ತದೆ ಎನ್ನುವುದರಲ್ಲಿ ಡೌಟೇ ಇಲ್ಲ. ನಿಧಾನಕ್ಕಾಗದರೂ ಟ್ಯಾಲೆಂಟ್ ಗೆ ಬೆಲೆ ಸಿಕ್ಕೇ ಸಿಗುತ್ತೆ.
ಸಾಧಿಸುವ ಛಲ ಇದ್ದವರಿಗೆ ಇಡೀ ಜಗತ್ತೇ ನಮಿಸುತ್ತದೆ.
ಹಾಗೇ ನಮ್ಮ ದೆಹಲಿಯ ಎಲೆಕ್ಟ್ರೀಷಿಯನ್ ಪುತ್ರನೋರ್ವನಿಗೆ ಅಮೆರಿಕಾದ ಕಂಪನಿಯೊಂದು ವಾರ್ಷಿಕ ಒಂದು ಲಕ್ಷ ಡಾಲರ್ ವೇತನದ ಪ್ಯಾಕೇಜ್ ನೀಡುವುದಾಗಿ ಆಫರ್ ನೀಡಿದೆ.
ನವದೆಹಲಿಯ ಸೆಂಟ್ರಲ್ ವಿಶ್ವವಿದ್ಯಾಲಯದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಡಿಪ್ಲೋಮಾ ವಿದ್ಯಾರ್ಥಿ ಮೊಹಮ್ಮದ್ ಆಮಿರ್ ಅಲಿ ತಯಾರಿಸಿದ ಬ್ಯಾಟರಿ ಚಾಲಿತ ವಾಹನದ ಯೋಜನೆ ಜಾಗತಿಕ ಮಟ್ಟದಲ್ಲಿ ಭಾರಿ ಮನ್ನಣೆ ಪಡೆಯುತ್ತಿದೆ.
ಭಾರತದಲ್ಲಿ ಬ್ಯಾಟರಿ ಚಾಲಿತ ವಾಹನಗಳನ್ನು ಚಾರ್ಜ್ ಮಾಡುವುದು ಸವಾಲಿನ ಕೆಲಸ. ಇದಕ್ಕೆ ಪ್ರೊಟೋಟೈಪ್ ಬ್ಯಾಟರಿಗಳನ್ನು ಬಳಕೆ ಮಾಡಲು,ಕಡಿಮೆ ಚಾರ್ಜಿಂಗ್ ನಲ್ಲಿ ಅತಿ ಹೆಚ್ಚು ದೂರ ಚಲಿಸಬಲ್ಲ ವ್ಯವಸ್ಥೆ ರಚಿಸಿ ಅಲಿ ತನ್ನ ಸಂಶೋಧನೆ ಮಂಡಿಸಿದ್ದರು. ಈ ಕಾರಣದಿಂದ ಅಮೆರಿಕಾದ ಆಟೋಮೊಬೈಲ್ ಕಂಪನಿಗಳು ಅಲಿಗೆ ಕೆಲಸ ನೀಡಲು ತಾ ಮುಂದು ನಾ ಮುಂದು ಎಂದು ದಂಬಾಲು ಬಿದ್ದಿವೆ.