ಅಗ್ನಿ ದುರಂತಕ್ಕೆ 19 ಮಂದಿ ಬಲಿಯಾದ ಘಟನೆ ಚೀನಾದ ಹೋಟೆಲ್ ಒಂದರಲ್ಲಿ ನಡೆದಿದೆ.
ಈಶಾನ್ಯ ಚೀನಾದ ಹೀಲೋಂಗ್ ಜಿಯಾಂಗ್ ಪ್ರಾಂತ್ಯದಲ್ಲಿ. ಈ ದುರಂತ ಸಂಭವಿಸಿದೆ. ಸೋಂಗ್ ಬೀ ಜಿಲ್ಲೆಯ ಬೀಲಾಂಗ್ ಹಾಟ್ ಸ್ಪ್ರಿಂಗ್ ಲೀಷರ್ ಹೋಟೆಲ್ ನಲ್ಲಿ ಅಗ್ನಿಯ ಕೆನ್ನಾಲಗೆಗೆ 19 ಮಂದಿ ಸಾವನ್ನಪ್ಪಿದ್ದಾರೆ.
20 ಮಂದಿಗೆ ಗಾಯಗಳಾಗಿವೆ. ಸತತ ಮೂರುಗಂಟೆಗಳ ಪರಿಶ್ರಮದಿಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ.