ಕೊಡಗು ಜಿಲ್ಲಾದ್ಯಂತ ಸುರಿದ ಮಳೆಗೆ ಮದುವೆಯೊಂದು ರದ್ದಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಮದುವೆಗೆ ಸಂಘಟನೆಗಳು ಮರುಜೀವ ನೀಡಿವೆ.
ಎಮ್ಮೆತಾಳು ಗ್ರಾಮದಲ್ಲಿ ನಡೆಯಬೇಕಿದ್ದ ಮಂಜುಳಾ ಮತ್ತು ರಜೀಶ್ ಅವರ ಮದುವೆ ರದ್ದಾಗುವ ಹಾಗೆ ಮಾಡಿತ್ತು ಮಳೆ. ವಧು ಕುಟುಂಬದವರೆಲ್ಲಾ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು. ವಸ್ತುಗಳೆಲ್ಲಾ ನಾಶವಾಗಿದ್ದವು.
ಮದುವೆ ನಿಂತೇ ಹೋಯಿತು ಎಂದು ಭಾವಿಸಲಾಗಿತ್ತು. ಹಾಗೂ ಸಾರ್ವಜನಿಕರು ಹಾಗೂ ನಾನಾ ಸಂಘಟನೆಗಳು ಮದುವೆ ಮಾಡಿಸಲು ಮುಂದಾಗಿ ಮಾನವೀಯತೆ ಮೆರೆದಿದ್ದಾರೆ.