ರಂಗೇರುತ್ತಿದೆ‌ ತುಮಕೂರು ಮಹಾನಗರ ಪಾಲಿಕೆ ಚುನಾವಣೆ

Date:

ತುಮಕೂರು ಮಹಾನಗರ ಪಾಲಿಕೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ .35 ವಾರ್ಡ್ ಹೊಂದಿರುವ ತುಮಕೂರು ಪಾಲಿಕೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಪೈಪೋಟಿ ಏರ್ಪಾಡು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದರೂ ಆಡಳಿತಾರೂಢ ಜೆಡಿಎಸ್ ಕಾಂಗ್ರೆಸ್ ಪ್ರಬಲ ಪೈಪೋಟಿ ಇದೆ.

ಇತ್ತ 21 ನೇ ವಾರ್ಡ್ ನಿಂದ ಮಾಜಿ ಮೇಯರ್ ಲಲಿತಾ ರವೀಶ್ ಜಾಂಗೀರ್ ಅವರ ಸ್ಪರ್ಧೆ ಮಾಡುತ್ತಿದ್ದು 2 ನೇ ಬಾರಿಗೆ ಪರೀಕ್ಷೆಗಿಳಿದಿದ್ದಾರೆ. ಜೆಡಿಎಸ್ ಪ್ರಭಾವಿ ನಾಯಕ ರವೀಶ್ ಜಾಂಗೀರ್ ಅವರ ಪ್ರಭಾವ ತುಮಕೂರು ನಗರದಲ್ಲಿ ಹೆಚ್ಚಾಗಿದ್ದು ಹಲವಾರು ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದಾರೆ . ಅವರ ಜನಪ್ರಿಯ ಹಾಗೂ ಜನಪರ ಕಾಳಜಿ ಹಾಗೂ ಕೆಲಸ ಅವರನ್ನು ಈಗಾಗಲೇ ಗೆಲುವಿನ ದಡ ಸೇರಿಸಿದೆ. ತುಮಕೂರು ನಗರದ ಅತ್ಯಂತ ಯಶಸ್ವಿ ಹಾಗೂ ಮಾದರಿ ವಾರ್ಡ್ ಎಂಬ ಹಿರಿಮೆಗೆ ಲಲಿತಾ ರವೀಶ್ ರವರು ಸಾಕಷ್ಟು ಶ್ರಮವಹಿಸಿದ್ದಾರೆ .

ಅವರ ಈ ಅಭಿವೃದ್ಧಿ ಕಾರ್ಯಗಳು ಮತ್ತೊಮ್ಮೆ ಗೆಲುವಿನ ದಡ ಸೇರಿಸಲಿದೆ ಎಂಬ ವಿಶ್ವಾಸ ಅವರದ್ದು ಮತ್ತು ಅವರ ಬೆಂಬಲಿಗರದ್ದು. ಲಲಿತಾ ರವೀಶ್ ಅವರ ಪತಿ ಜಾಂಗೀರ್ ಅವರು ಒಂದು ಬಾರಿ ತುಮಕೂರು ನಗರ ಕ್ಷೇತ್ರದಿಂದ ಸ್ಪರ್ಧಿಸಿ ಸ್ವಲ್ಪ ಅಂತರದಲ್ಲಿ ಪರಾಭವ ಗೊಂಡಿದ್ದರು. ಪಕ್ಕದ 20 ನೇ ವಾರ್ಡ್ ನಿಂದ ಎ ಶ್ರೀನಿವಾಸ್ ಅವರು ಸ್ಪರ್ಧಿಸುತ್ತಿದ್ದು ಪ್ರಥಮಬಾರಿಗೆ ಚುನಾವಣಾ ಕಣದಲ್ಲಿದ್ದು ಗೆಲುವಿನ ನಗೆ ಬೀರಲು ಸಿದ್ದರಾಗಿದ್ದಾರೆ. ಜನ ಸಾಗರೋಪಾದಿಯಲ್ಲಿ ಬೆಂಬಲಿಸುತ್ತಿದ್ದಾರೆ.

23 ನೇ ವಾರ್ಡ್ ನಿಂದ T K ನರಸಿಂಹಮೂರ್ತಿ ಅವರು ಸ್ಪರ್ಧಿಸುತ್ತಿದ್ದು ಮಾಜಿ ನಗರಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ನರಸಿಂಹಮೂರ್ತಿ ಅವರ ಗೆಲುವಿನ ಗೋಪುರವಾಗಿ ಮಾರ್ಪಾಡು ಮಾಡಿದೆ.‌ಈ ಮೂರು ವಾರ್ಡ್ ಗಳಲ್ಲಿ ರವೀಶ್ ಜಾಂಗೀರ್ ಅವರ ಪ್ರಭಾವ ವರ್ಕೌಟ್ ಆಗುವುದರಲ್ಲಿ ಅನುಮಾನವಿಲ್ಲ ಎಂಬ‌ಅಭಿಪ್ರಾಯ ವ್ಯಕ್ತವಾಗಿದೆ. ಎಸ್ ಆರ್ ಶ್ರೀ ನಿವಾಸ್ ಅವರು ಕುದ್ದು ರವೀಶ್ ಜಾಂಗೀರ್ ಅವರ ವಾರ್ಡ್ ನಲ್ಲಿ ಮನೆಮನೆಯಲ್ಲಿ ಪ್ರಚಾರ ನಡೆಸಿದ್ದಾರೆ. ರವೀಶ್ ಜಾಂಗೀರ್ ಅವರ ಸಮಾಜಮುಖಿ ಕಾರ್ಯಗಳು ಈ ಸಲವು ಕೈಹಿಡಿಯಲಿದೆ ಎಂಬ ನಿರೀಕ್ಷೆ ಇದೆ. ಅವರು ಎಲ್ಲಾ ಸಮುದಾಯವನ್ನು ಪ್ರೀತಿಸುವುದರಿಂದ ಎಲ್ಲಾ ಸಮುದಾಯಗಳು ಒಗ್ಗೂಡಿ ರವೀಶ್ ಅವರಿಗೆ ಬೆಂಬಲಿಸಲು ಮುಂದಾಗಿದ್ದಾರೆ. ಜಾತಿ ಪಕ್ಷ ಮೀರಿದ ಜನನಾಯಕ ಶ್ರೀ ರವೀಶ್ ಜಾಂಗೀರ್ ಅವರು ಎಂಬುದು ಬಹುತೇಕ ಮತದಾರರ ಮನದ ನುಡಿ.

Share post:

Subscribe

spot_imgspot_img

Popular

More like this
Related

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌ ಬೆಂಗಳೂರು: ಗ್ಯಾರಂಟಿ...

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಹಾಸನ: ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ...

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್! ಚಿನ್ನ ಖರೀದಿಗೆ...

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ! ಬೆಂಗಳೂರು:...