ಬಿಗ್ ಬಾಸ್ ಸೀಸನ್ 6 ರ ಕುತೂಹಲ ಗರಿಗೆದರುತ್ತಿರುವ ಸಮಯವಿದು. ಈಗ ಇದಕ್ಕಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪ್ರೋಮೋ ಶೂಟ್ ಸಹ ಆಗಿದೆ.
ಕಳೆದ ಸೀಸನ್ ನಲ್ಲಿ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಿದ್ದರಿಂದ ಈ ವರ್ಷ ಕುತೂಹಲ ಇನ್ನೂ ಹೆಚ್ಚಿದೆ. ಸ್ಪರ್ಧಿಗಳ ಆಯ್ಕೆ ಸಹ ಸದ್ದಿಲ್ಲದೆ ನಡೆಯುತ್ತಿದೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿಚ್ವಿಸಿದವರು ವೂಟ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆಡಿಷನ್ ನಡೆಯುತ್ತಿದೆ.
ಈ ನಡುವೆ ಸುದೀಪ್ ಪ್ರೋಮೋ ಶೂಟ್ ಮುಗಿಸಿದ್ದಾರೆ. ಜೀನ್ಸ್ ಪ್ಯಾಂಟ್ ಟೀ, ಶರ್ಟ್, ಜಾಕೆಟ್ ಧರಿಸಿ ಸೋಫ ಮೇಲೆ ಕುಳಿತು ಸುದೀಪ್ ಬಿಗ್ ಬಾಸ್ ಬಗ್ಗೆ ಹೇಳಿದ್ದಾರೆ.
‘ ಮೆಸೇಜ್ ಗೆ, ಸೋಷಿಯಲ್ ಮೀಡಿಯಾಗೆ, ಫೋಟೋ ತೆಗೆಯೋಕೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಗೂ ಫೋನ್. ಹೀಗೆ ಇಡೀ ಲೈಫ್ ಫೋನಿನಲ್ಲಿ ಇರಬೇಕಾದರೆ, ಬಿಗ್ ಬಾಸ್ ಫೋನ್ ನಲ್ಲಿ ಇಲ್ಲ ಅಂದ್ರೆ….? ಈಗಲೇ ವೂಟ್ ಡೌನ್ ಲೋಡ್ ಮಾಡಿಕೊಳ್ಳಿ, ಬಿಗ್ ಬಾಸ್ ನೋಡಿ….ವೂಟ್ ನಲ್ಲಿ ನೋಡಿಲ್ಲ ಅಂದ್ರೆ ನೀವು ಬಿಗ್ ಬಾಸೇ ನೋಡಿಲ್ಲ ಎಂದು ಸುದೀಪ್ ಹೇಳಿದ್ದಾರೆ.
ಬಿಗ್ ಬಾಸ್ ಪ್ರೋಮೋ ಸೆಟ್ ನಿಂದ ಅಭಿನಯ ಚಕ್ರವರ್ತಿ ಸುದೀಪ್ ಜೊತೆ #fblive #BBK6 #colorsSuper #kicchasudeep
Posted by Colors Super on Sunday, August 26, 2018