‘ಚಂದನ’ವನಕ್ಕೆ ಬರಲಿರುವ ಚಂದದ ಹುಡುಗ…!

Date:

ಚಂದನವನದಲ್ಲೀಗ ಹೊಸಬರ ಕಲರವ…! ಸ್ಯಾಂಡಲ್ ವುಡ್ ನಲ್ಲಿ ಹೊಸಮುಖಗಳ ಅನಾವರಣ ಆಗುತ್ತಿದೆ. ಹೊಸ ಕಲಾವಿದರು, ನಿರ್ದೇಶಕರು, ಗಾಯಕರು ಹೀಗೆ ಎಲ್ಲದರಲ್ಲೂ ನಮ್ಮ ಚಿತ್ರಲೋಕ ಹೊಸತನ, ಹೊಸಬರನ್ನು ಕಾಣುತ್ತಿದೆ. ಅನುಭವಿಗಳ ಮಾರ್ಗದರ್ಶನದಲ್ಲಿ ಹೊಸ ಪ್ರತಿಭೆಗಳು ತಮ್ಮ ಸಾಮಾರ್ಥ್ಯವನ್ನು ಸಾಬೀತುಪಡಿಸಿ ಚಂದದವನಕ್ಕೆ ಗಟ್ಟಿ ಆಸ್ತಿಯಾಗುವ ಭರವಸೆ ಮೂಡಿಸುತ್ತಿದ್ದಾರೆ. ಇಂತಹವರ ಸಾಲಿನಲ್ಲಿ ಪಿಸು ಸದ್ದು ಮಾಡ್ತಾ ಹಂತ ಹಂತವಾಗಿ ಬೆಳೆಯುತ್ತಿದ್ದಾರೆ ಯುವ ನಟ ಚಂದನ್.

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ‘ಮಾಂಗಲ್ಯಂ ತಂತು ನಾನೇನ’ ದಲ್ಲಿ ಶ್ರಾವಣಿ ಮತ್ತು ಪಾವನಿಯ ಅಣ್ಣ ಅಭಿ ಗೊತ್ತಿದೆಯಲ್ಲಾ? ಅವರ ಬಗ್ಗೆಯೇ ನಾನಿಲ್ಲಿ ಹೇಳ ಹೊರಟಿರೋದು.


ಹೆಚ್ಚು ಕಮ್ಮಿ ತಿಂಗಳ ಹಿಂದೆಯೇ ಚಂದನ್ ಕಾಂಟೆಕ್ಟ್ ನಂಬರ್ ತಗೊಂಡಿದ್ದೆ.‌ ವಾರದ ಹಿಂದೆ ಕರೆ ಮಾಡಿದೆ ಆಗ ಅವರು ಶೂಟಿಂಗ್ ನಲ್ಲಿದ್ರು. ಅವರು ವಾಪಸ್ಸು ಕರೆಮಾಡಿದಾಗ ನಾನು ಆಚೆಯಿದ್ದೆ…ಆಮೇಲೆ ಕಾಂಟೆಕ್ಟ್ ಮಾಡಲು ಸಾಧ್ಯವಾಗಿರ್ಲಿಲ್ಲ. ಇವತ್ತು ಮಾತಿಗೆ ಸಿಕ್ಕರು…ಲೋಕಾಭಿರಾಮವಾಗಿ‌ ಮಾತಾಡ್ತಾ ಹೋದ್ವಿ. ಮಾತನಾಡುವಾಗ ಅವರ ಯಾವುದೋ ಒಂದು ಮಾತು ನಂಗೆ ಸರಿಯಾಗಿ ಕೇಳಲಿಲ್ಲ.‌ ಕ್ಷಮೆಯಾಚಿಸಿ, ಇನ್ನೊಮ್ಮೆ ಹೇಳುವಂತೆ ಮನವಿ ಮಾಡಿದೆ.

ಆ ವೇಳೆ ಅವರು, ‘ನೀವು ಬರೆದುಕೊಳ್ಳುತ್ತಿದ್ದೀರ?’ ದಯವಿಟ್ಟು ಬೇಡ‌. ನಾನಿನ್ನೂ ಹೊಸಬ…ಬರೆಯುವುದಾದರೆ ನಾನು ಮಾತನಾಡುವುದಿಲ್ಲ ಎಂದು ಬೇರೆಕಡೆ ಮಾತು ಹೊರಳಿಸಿದರು.

ಚಂದನ್ ತುಂಬಾ ಸಂಕೋಚ ಸ್ವಭಾವದ ವ್ಯಕ್ತಿ ಎಂಬುದನ್ನು ಆತ್ಮೀಯರೊಬ್ಬರಿಂದ ತಿಳಿದುಕೊಂಡಿದ್ದೆ. ಚಂದನ್ ಜೊತೆ ಮಾತಾಡಿದಾಗ ಅದು ಸತ್ಯ ಎನಿಸಿತು.

ಚಂದನ್ ಸಾಧನೆಯತ್ತ ಅಂಬೆಗಾಲಿಡುತ್ತಿದ್ದಾರಷ್ಟೇ.‌ ಆದರೆ, ಖಂಡಿತಾ ಒಂದಲ್ಲ ಒಂದು ದಿನ ಅವರು ಸಾಧಿಸುತ್ತಾರೆ ಎಂಬುದನ್ನು ಅವರೊಳಗಿ‌ನ ಕಲಾವಿದ ಖಾತ್ರಿಪಡಿಸಿದ್ದಾನೆ.

ಚಂದನ್ ಗೆ ಚಂದನವನದಲ್ಲಿ ಭವಿಷ್ಯ ಇದೆ. ಸಿಕ್ಕ ಅವಕಾಶಗಳನ್ನೆಲ್ಲಾ ಸಮರ್ಥವಾಗಿ ಬಳಸಿಕೊಳ್ಳುವವರು ಗೆಲ್ಲದೇ ಇರಲು ಸಾಧ್ಯವೇ?
ಅಂದಹಾಗೆ ಚಂದನ್ ಹುಟ್ಟಿದ್ದು ಬೆಳೆದಿದ್ದೆಲ್ಲಾ ಬೆಂಗಳೂರಲ್ಲೇ. ತಂದೆ ಚನ್ನ‌ಮಾರೆಗೌಡರು ತಾಯಿ ಜಯಲಕ್ಷ್ಮಿ .
ಶಾಂತಿಧಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ,‌ ಕೆಎಲ್ ಇ ಕಾಲೇಜಿನಲ್ಲಿ ಪಿಯುಸಿ ಯನ್ನು, ಈಸ್ಟ್ ವೆಸ್ಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ರು.

ಶಾಲಾ ಕಾಲೇಜು ದಿನಗಳಲ್ಲೇ ಸಾಂಸ್ಕೃತಿಕ ಚಟುವಟಿಕೆಗಳತ್ತ ಸಿಕ್ಕಾಪಟ್ಟೆ ಆಸಕ್ತಿ.‌ ನಟನಾಗಬೇಕೆಂಬ ಆಸೆ ಇತ್ತಾದರೂ ಇಂಜಿನಿಯರಿಂಗ್ ಗೆ ಬರುವ ತನಕ ಅದನ್ನು ಸೀರಿಯಸ್ ಆಗಿ ತಗೊಂಡಿರ್ಲಿಲ್ಲ. ಮೊದಲ ವರ್ಷದ ಬಿಇ ಮಾಡುವಾಗ ಅದ್ಯಾಕೋ ಕಲಾವಿದನಾಗಿ ಬದುಕುಕಟ್ಟಿಕೊಳ್ಳಬೇಕೆಂಬ ಆಸೆ ಬಿಗಿಯಾಗುತ್ತೆ.‌ ಮೊದಲು ಓದು ಮುಗಿಸು ಆಮೇಲೆ ಆ ಕಡೆ ಗಮನ ಕೊಡು ಅಂತ ಅಮ್ಮ ಸಲಹೆ ನೀಡ್ತಾರೆ.‌ ಅಮ್ಮನ ಮಾತಿಗೆ ಬೆಲೆಲೊಟ್ಟು ಇಂಜಿನಿಯರಿಂಗ್ ಮುಗಿಯುವ ತ‌ನಕ ಬಣ್ಣಹಚ್ಚುವ ಬಗ್ಗೆ ಯೋಚನೆ ಮಾಡದೆ ಕಲಿಕೆಯತ್ತ ಕಾನ್ಸನ್ ಟ್ರೇಟ್ ಮಾಡ್ತಾರೆ.

ಬಿಇ ಜೊತೆ ಜೊತೆಗೆ ಡ್ಯಾನ್ಸಿಂಗ್ ಕ್ಲಾಸ್ ಗೂ ಹೋಗ್ತಾ ಇದ್ದ ಚಂದನ್ ಗೆ ಕೋರಿಯಾಗ್ರಾಫರ್ ಪವನ್ ಅವರಿಂದ ‘ಕಲರ್ಸ್ ಡ್ಯಾನ್ಸಿಂಗ್ ಸ್ಟಾರ್ ‘ ನಲ್ಲಿ ಭಾಗವಹಿಸುವ ಅವಕಾಶ ಸಿಗುತ್ತೆ.‌ ಆ ರಿಯಾಲಿಟಿ ಶೋ ಮೂಲಕ ಚಂದನ್ ಮೊದಲ ಬಾರಿಗೆ ಟೆಲಿವಿಷನ್ ಪರದೆ ಮೇಲೆ ಕಾಣಿಸಿಕೊಳ್ತಾರೆ.‌

‘ಆಜೀವಿಕ’ ತಂಡ ಸೇರಿ ನಾಟಕದಲ್ಲಿ ಬಣ್ಣಹಚ್ಚಿ ತನ್ನೊಳಗಿನ ಕಲಾವಿದನನ್ನು ಮತ್ತಷ್ಟು ಚಂದಗಾಣಿಸಿಕೊಳ್ಳುವ ಕೆಲಸಕ್ಕೆ ಚಂದನ್ ಮುಂದಾಗ್ತಾರೆ.  ಹೀಗಿರುವಾಗ ‘5 ಅಡಿ 7 ಅಂಗುಲ’ ಸಿನಿಮಾದಲ್ಲಿ ಚಿಕ್ಕಪಾತ್ರವಸಿಗುತ್ತೆ.

ತದನಂತರ ಮಾಸ್ಟರ್ ಆನಂದ್ ಪರಿಚಯ. ಅವರಿಂದ ‘ನಿಗೂಢ ರಾತ್ರಿ’ ಯಲ್ಲಿ ನಟಿಸು ಚಾನ್ಸ್ ಸಿಗುತ್ತೆ.
ಬಳಿಕ ‘ ಕಥಾಸಂಗಮ’ ದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂದೆ? ಎಂಬ ಪ್ರಶ್ನೆ ಎದುರದಾಗ ನಿರ್ದೇಶಕ ರಘುಚರಣ್ ಅವರು ಮಾಂಗಲ್ಯಂ ತಂತುನಾನೇನ ಸೀರಿಯಲ್ ನಲ್ಲಿ ಒಂದೊಳ್ಳೆ ಪಾತ್ರಕೊಟ್ಟಿದ್ದಾರೆ.ಚಂದನ್ ಈ ಧಾರವಾಹಿಯಲ್ಲಿ ನಾಯಕಿ ಶ್ರಾವಣಿ (ದಿವ್ಯ) ತಂಗಿ ಪಾವನಿ ( ಪ್ರಜ್ಞಾ) ಯ ಅಣ್ಣ.

ಸಿನಿಮಾದಲ್ಲಿ ಅವಕಾಶಗಳೇನೋ ಬರುತ್ತಿವೆ. ಸದ್ಯ ಸೀರಿಯಲ್ ಅನ್ನು ಸೀರಿಯಸ್ ಆಗಿ ತಗೊಂಡು , ಆ ಕಡೆ ಸಂಪೂರ್ಣ ಗಮನ ನೀಡಿದ್ದಾರೆ. ಜೊತೆ ಜೊತೆಗೆ ‘ಮನೋರಂಗ’ ತಂಡದ ಜೊತೆಗೂ ಗುರುತಿಸಿಕೊಂಡು, ನಾಟಕಗಳಲ್ಲಿ ಅಭಿನಯಿಸುತ್ತಿರುವ ಇವರು ಒಂದೊಳ್ಳೆ ಕಥೆ, ತಂಡ ಸಿಕ್ಕರೆ ಚಂದನವನದತ್ತ ಮುಖಮಾಡಲು ಉತ್ಸುಕರಾಗಿದ್ದಾರೆ‌.

ಹಿಂದೆ ಚಂದನ್ ನಿಂದ ದೂರವಿದ್ದವರು, ಬೆಳವಣಿಗೆ ನೋಡಿ ಹತ್ತಿರವಾಗುವ ಪ್ರಯತ್ನದಲ್ಲಿದ್ದಾರೆ‌. ಚಂದನ್ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುವ ಜಾಯಮಾನದವರಲ್ಲ…ಗುರಿ ಮತ್ತು ಅದನ್ನು ತಲುಪಿಸುವ ಕೆಲಸ ಕೆಲಸ ಕೆಲಸದತ್ತ ಮಾತ್ರ ಗಮನಕೊಡುತ್ತಿದ್ದಾರೆ.
ಪ್ರತಿ ಅವಕಾಶಗಳೂ ಸಹ ಖುಷಿಕೊಟ್ಟಿವೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಬೆಳೆಯ ಬೇಕೆಂದು ಹೇಳುವ ಚಂದನ್ ಅವರ ಅಮ್ಮನ ಆಸೆಯಂತೆ ದೊಡ್ಡ ನಟರಾಗಿ ಬೆಳೆಯಲಿ ಎಂದು ಶುಭಕೋರುತ್ತಾ….
-ಶಶಿಧರ್ ಎಸ್ ದೋಣಿಹಕ್ಲು

 

Share post:

Subscribe

spot_imgspot_img

Popular

More like this
Related

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಹಾಸನ: ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ...

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್! ಚಿನ್ನ ಖರೀದಿಗೆ...

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ! ಬೆಂಗಳೂರು:...

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್ ಬಿಗ್ ಬಾಸ್ ಕಾರ್ಯಕ್ರಮ...