ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ದುರ್ಮರಣವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಘಟಿಸಿದೆ.
ಸಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಕಳ್ಳಂಬೆಳ್ಳ ಬಳಿ ಘಟನೆ ನಡೆದಿದ್ದು, ನಿಖಿತಾ (,27) , ಧನರಾಜ್ (45) ಮತ್ತು ಪರಮೇಶ್ವರ್ ನಾಯ್ಕ್ ಮೃತ ದುರ್ದೈವಿಗಳು. ಪರಮೇಶ್ವರ್ ನಾಯಕ್ ಕಾರವಾರದವರು , ನಿಖಿತಾ ಮತ್ತು ಧನರಾಜ್ ಬೆಂಗಳೂರು ಮೂಲದವರು ಎಂದು ಗುರುತಿಸಲಾಗಿದೆ.
ಎರಡು ಬಸ್ ಗಳು ಸಹ ಚಿತ್ರದುರ್ಗ ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದವು. ಈ ವೇಳೆ ಕಳ್ಳಂಬೆಳ್ಳ ಬಳಿ ಖಾಸಗಿ ಬಸ್ ಕೆಎಸ್ ಆರ್ ಟಿಸಿ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. 10 ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಮೂವರ ದುರ್ಮರಣ
Date: