ತನ್ನನ್ನು ತಾನು ಸೂಪರ್ ಸಿಂಗರ್ ಎಂದು ಕೊಂಡಿರುವ ವಿಚಿತ್ರ ಹಾಡುಗಾರ ತುಳಸಿ ಪ್ರಸಾದ್ ವಿರುದ್ಧ ಕಳ್ಳತನದ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಬಿಗ್ ಬಜಾರ್ ಒಂದರಲ್ಲಿ ಈತ ಕದ್ದಿದ್ದಾನೆ ಎನ್ನಲಾಗಿದ್ದು ಯಾವುದೇ ಆಧಾರವಿಲ್ಲ.
ತುಳಸಿ ಪ್ರಸಾದ್ ಬಜಾರ್ ನಲ್ಲಿ ಕಳ್ಳತನ ಮಾಡಿದ್ದಾನೆ ಎನ್ನಲಾದ ವೀಡಿಯೋವೊಂದು ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ತುಳಸಿ ಪ್ರಸಾದ್ ಅಮಾಯಕನಂತೆ ನಿಂತಿದ್ದಾನೆ. ಬಿಗ್ ಬಜಾರ್ ಸಿಬ್ಬಂದಿ ತುಳಸಿ ಪ್ರಸಾದ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತುಳಸಿ ಪ್ರಸಾದ್ ಕರ್ಕಶವಾಗಿ ಹಾಡುವ ಮೂಲಕವೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುವಾತ. ಜನ ಬೈಯುತ್ತಾ ಬೈಯುತ್ತಲೇ ಈತನ ವೀಡಿಯೋಗಳ ವೀಕ್ಷಣೆ ಹೆಚ್ಚಾಗುವಂತೆ ಮಾಡಿದ್ದಾರೆ..! ಈತ ಬಿಗ್ ಬಾಸ್ ಮನೆಗೆ ಹೋಗುವುದಾಗಿಯೂ ಹೇಳಿಕೊಂಡು ಸುತ್ತುತ್ತಿದ್ದಾನೆ.