ರಾಘವೇಂದ್ರ ಸಾರ್ವಭೌಮರ 347ನೇ ಆರಾಧನಾ ಮಹೋತ್ಸವಕ್ಕೆ ಉತ್ತರ ಆರಾಧನೆ ಮೂಲಕ ಇಂದು ವಿದ್ಯುಕ್ತ ತೆರೆ ಬೀಳಲಿದೆ. ಮಂತ್ರಾಲಯದಲ್ಲಿ ಭಕ್ತಿ ಲೋಕದ ವೈಭವ ಸೃಷ್ಠಿಯಾಗಿದೆ. ಮುಖ್ಯ ಬೀದಿ ಬೀದಿಗಳಲ್ಲಿ ಮಹಾ ರಥೋತ್ಸವ ಜರುಗಲಿದೆ.
ರಾಯರು ಇಂದು ಪ್ರಹ್ಲಾದ ರಾಜರಾಗಿ ಬಹಿರ್ಮುಖ ದರ್ಶನವನ್ನು ನೀಡುತ್ತಾರೆ ಎಂಬ ನಂಬಿಕೆ ಇದೆ.
ಪ್ರಹ್ಲಾದ ರಾಜರಿಗೆ ಶ್ರೀಗಳ ಹೋಲಿಕೆಯನ್ನು ಹಾಕುವ ಮುಖೇನ ವಸಂತೋತ್ಸವ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಸ್ವಸ್ತಿವಾಚನ ಮತ್ತು ಮಹಾಮಂಗಳಾರತಿಯೊಂದಿಗೆ ಉತ್ತರ ಆರಾಧನೆ ಕಾರ್ಯಕ್ರಮ ಪೂರ್ಣಗೊಳ್ಳುತ್ತದೆ.