ರಷ್ಯಾದಲ್ಲಿ ಭಾರತೀಯ ಹಾಡಿಗೆ ಪಾಕಿಸ್ತಾನ್ ಸೈನಿಕರು ಹೆಜ್ಜೆ ಹಾಕಿದ್ದಾರೆ. ರಷ್ಯಾದ ಶಾಂಘೈ ಕಾರ್ಪೋರೇಷನ್ ಆರ್ಗನೈಸೇಶನ್ ಆಯೋಜಿಸಿರುವ ಭಯೋತ್ಪಾದನಾ ವಿರೋಧಿ ಸಮರಾಭ್ಯಾಸದಲ್ಲಿ ಈ ಅಪರೂಪದ ಘಟನೆ ನಡೆದಿದೆ.
ಸಮರಾಭ್ಯಾಸದಲ್ಲಿ ಭಾರತ, ಪಾಕಿಸ್ತಾನ, ರಷ್ಯಾ ಮತ್ತು ಚೀನಾ ಸೈನಿಕರು ಬೆವರಿಳಿಸುತ್ತಿದ್ದಾರೆ.
ಮೈಂಡದ ಫ್ರೆಶ್ ಸಲುವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ವೇಳೆ ಭಾರತ ಮತ್ತು ಪಾಕಿಸ್ತಾನ ಸೈನಿಕರು ಹಿಂದಿ ಗೀತೆಗಳಿಗೆ ಒಟ್ಟಾಗಿ ಹೆಜ್ಜೆ ಹಾಕಿದರು. ಅಭ್ಯಾಸದ ವೇಳೆ ನಡೆದ ವಾಲಿಬಾಲ್ ಪಂದ್ಯದಲ್ಲಿ ಭಾರತದ ಸೈನಿಕರು, ಪಾಕ್ ಸೈನಿಕರ ವಿರುದ್ಧ ಗೆಲುವಿನ ನಗೆ ಬೀರಿದರು.