ಹೆಡ್ಡರ್ ನೋಡಿ ಬೆಚ್ಚಿಬೀಳಬೇಡಿ.. ಅದು 100ಕ್ಕೆ 100ರಷ್ಟು ಸತ್ಯ. ಒಬ್ಬನೇ ವ್ಯಕ್ತಿ ನಿಜ ಜೀವನದಲ್ಲಿ 800ಕ್ಕೂ ಹೆಚ್ಚು ಮಕ್ಕಳ ತಂದೆಯಾಗಿದ್ದಾನೆ..! ಅದರ ಮೂಲಕವೇ ವಿಶ್ವವಿಖ್ಯಾತಿ ಪಡೆದಿದ್ದು, ನೂರಾರು ದಾಖಲೆಗಳ ವೀರನೆನಿಸಿಕೊಂಡಿದ್ದಾನೆ..! ಆದರೆ ಆತ 800 ಮಕ್ಕಳಿಗೆ ತಂದೆಯಾಗಿದ್ದು ವೀರ್ಯದಾನದಿಂದ ಎಂಬುದು ನಿಮ್ಮ ಗಮನಕ್ಕಿರಲೇಬೇಕು..!
2012ರಲ್ಲಿ ಬಿಡುಗಡೆಯಾದ ಬಾಲಿವುಡ್ ಸಿನಿಮಾ ವಿಕ್ಕಿ ಡೋನರ್ ನೆನಪಿರಬಹುದು. ವೀರ್ಯ ದಾನಿಯಾಗಿರುವ ಯುವಕನೊಬ್ಬನ ಕಥೆಯೇ ಆ ಚಿತ್ರಕ್ಕೆ ಜೀವಾಳವಾಗಿತ್ತು. ಆದರೆ ಅಂಥದ್ದೇ ಒಬ್ಬ ವೀರ್ಯ ದಾನಿ ಬ್ರಿಟನ್ನಲ್ಲಿದ್ದಾನೆ. ಈತನ ಹೆಸರು ಸೈಮನ್ ವಾಟ್ಸನ್, ವಯಸ್ಸು 41. ಕಳೆದ 16 ವರುಷಗಳಿಂದ ಈತ ವೀರ್ಯ ದಾನ ಮಾಡುತ್ತಿದ್ದಾನೆ. ಮೂರು ಮಕ್ಕಳ ಅಪ್ಪನಾಗಿರುವ ಈತ ವೀರ್ಯದಾನ ಮಾಡಿದ ಲೆಕ್ಕ ನೋಡಿದರೆ 800 ಮಕ್ಕಳಿಗೆ ತಂದೆಯಾಗಿದ್ದಾನೆ. ಅಂದರೆ ಪ್ರತೀ ವಾರಕ್ಕೆ ಒಂದು ಮಗು..!
ಒಂದು ಬಾರಿ ವೀರ್ಯದಾನದ ಬಗ್ಗೆ ಫೇಸ್ ಬುಕ್ ನಲ್ಲಿ ಈತ ಪೋಸ್ಟ್ ಹಾಕಿದ್ದ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದವು. ಈತ ಒಂದು ಬಾರಿ ವೀರ್ಯದಾನಕ್ಕಾಗಿ ಈತ 50 ಪೌಂಡ್ ತೆಗೆದುಕೊಳ್ಳುತ್ತಿದ್ದ. ಇದಕ್ಕೆ ಆತನ ಕುಟುಂಬದಿಂದ ಯಾವುದೇ ತೊಂದರೆಯಾಗಲಿಲ್ಲ. ಮೊದಲ ಪತ್ನಿಯಿಂದ 19 ಮತ್ತು 17ರ ಹರೆಯದ ಇಬ್ಬರು ಗಂಡು ಮಕ್ಕಳು ಮತ್ತು ಎರಡನೇ ಪತ್ನಿಯಿಂದ 10 ವರ್ಷದ ಮಗಳನ್ನು ಸೈಮನ್ ಪಡೆದಿದ್ದಾರೆ. ಈತನ ಪತ್ನಿಯರಿಗೆ ಈ ಎಲ್ಲ ವಿಷಯಗಳೂ ಗೊತ್ತು ಎಂದು ಸೈಮನ್ ಹೇಳಿದ್ದಾರೆ.
2014 ರಲ್ಲಿ 12 ದೇಶದ ಮಹಿಳೆಯರಿಗೆ ನಾನು ವೀರ್ಯದಾನ ಮಾಡಿದ್ದೇನೆ. ಇದು ವಿಶ್ವ ದಾಖಲೆ ಎಂದು ಸೈಮನ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.