ಇವರು ದಿನನಿತ್ಯ 100 ಮಂದಿಗೆ ಅನ್ನ ನೀಡುವ ಮಹಾದಾನಿ..! ಹಸಿದವರ ಹಸಿವನ್ನು ನೀಗಿಸೋ ಅನ್ನದಾತ ಅಜರ್..!

Date:

ಎಲ್ಲರೂ ಸಾಮಾನ್ಯರೇ..! ಆದರೆ ಕೆಲವರು ಅಸಾಮಾನ್ಯ ಕೆಲಸದಿಂದ, ವ್ಯಕ್ತಿತ್ವದಿಂದ ಎಲ್ಲರ ಆದರ್ಶರಾಗಿ ಬೆಳೆಯುತ್ತಾರೆ..! ತಮ್ಮದೇ ಆದ ಘನತೆ, ಗೌರವವನ್ನು ಸಂಪಾದಿಸ್ತಾರೆ..! ಅಸಾಮಾನ್ಯ ಕೆಲಸದಿಂದ, ನಡೆಯಿಂದ ಉಳಿದ ಸಾಮಾನ್ಯರ ನಡುವೆ ಅಸಾಮಾನ್ಯರಾಗಿ ಕಂಗೊಳಿಸ್ತಾರೆ..!
ಇಂಥಾ ಅಸಾಮಾನ್ಯರಲ್ಲಿ ಕೆಲವರು ಬೇಗನೇ ಸಮಾಜದಲ್ಲಿ ಗುರುತಿಸಿ ಕೊಳ್ತಾರೆ..! ಕೆಲವರು, ಎಲೆಮರೆಯ ಕಾಯಿಯಂತಿರ್ತಾರೆ..! ಅವರು ಬೆಳಕಿಗೆ ಬರೋದೇ ಇಲ್ಲ..! ಬಂದರೂ ಹೆಚ್ಚಿನ ಪ್ರಚಾರ ಅವರಿಗೆ ಸಿಗಲ್ಲ..! ಅದನ್ನು ಅವರು ಬಯಸುವುದಿಲ್ಲಾ ಕೂಡ..! ಅಂಥವರಲ್ಲಿ ಒಬ್ಬರನ್ನು ಈಗ ಪರಿಚಯ ಮಾಡಿಕೊಡಲು ಇಷ್ಟ ಪಡ್ತೀನಿ..!
ಹ್ಞಾಂ, ಅವರ ಹೆಸರು `ಅಜರ್’ ಅಂತ. ಹೈದರಾಬಾದ್ ನ ಇವರೊಬ್ಬ ಸಾಮಾನ್ಯ ಅಂಗಡಿಯವರು. ಸಾಧರಣ ವ್ಯಾಪಾರ ಆಗುತ್ತೆ. ಆದರೂ ಇವರು ದಾನದಲ್ಲಿ ಶೂರ..! ದಾನ ಶೂರ ಅಜರ್..!
ಅಷ್ಟಕ್ಕೂ ಅಜರ್ ಎಂಥಾ ದಾನಿ ಗೊತ್ತಾ..?! ಅನ್ನದಾನಿ, ಅನ್ನದಾತ..! ವರ್ಷಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ನಾಲ್ಕು ಜನರಿಗೆ ಅನ್ನ ಹಾಕಿ ನಮ್ಮತ್ರ ದಾನಿ ಅಂತ ಕರೆಸಿಕೊಳ್ತಾ ಇರೋರಲ್ಲ ಇವರು..! ದಿನನಿತ್ಯ ಒಬ್ಬರಿಗಲ್ಲ, ಇಬ್ಬರಿಗಲ್ಲ, ಮೂವರಿಗಲ್ಲ, ನಾಲ್ವರಿಗಲ್ಲ……. ನೂರು 100 ಜನರ ಹಸಿವನ್ನು ನೀಗಿಸ್ತಾರೆ..! ಯಾವ ಒಬ್ಬ ಆಗರ್ಭ ಶ್ರೀಮಂತನೂ ಮಾಡದಷ್ಟು `ಅನ್ನದಾನ’ ಮಾಡ್ತಾರೆ ಅಜರ್..!

Azhar Maqsusi 1
ದಿನಾಲೂ ಮಧ್ಯಾಹ್ನ ಮನೆಯಿಲ್ಲದವರು, ನಿರ್ಗತಿಕರು ಸಾಲುಗಟ್ಟಿ ಹೈದರಾಬಾದ್ ನ ದಾಬೀರ್ಪುರ ಸೇತುವೆ ಬಳಿ ಅಜರ್ ನೀಡೋ ಅನ್ನಕ್ಕಾಗಿ ತಾಳ್ಮೆಯಿಂದ ಕಾಯ್ತಾ ಇರ್ತಾರೆ..!ತಮ್ಮ ತಮ್ಮ ತಟ್ಟೆಗಳನ್ನು ತೊಳೆದು ಕೊಂಡು ಅನ್ನಕ್ಕಾಗಿ ಕಾದಿರ್ತಾರೆ..! ಅಜರ್ ದಿನಾಲೂ 100 ನಿರಾಶ್ರಿತರಿಗೆ, ನಿರ್ಗತಿಕರಿಗೆ ಊಟ ನೀಡ್ತಾ ಇದ್ದಾರೆ..! ದಿನಕ್ಕೆ ಹೆಚ್ಚು ಕಡಿಮೆ 25 ಕೆಜಿ ಅಕ್ಕಿ,1 ಲೀಟರ್ ಎಣ್ಣೆ, 2ಕೆಜಿ ಬೇಳೆಕಾಳು ಬೇಕಾಗುತ್ತೆ..! ಏನಿಲ್ಲ ಅಂದ್ರೂ ದಿನಕ್ಕೆ 1500-1700 ರೂ ಪಾಯಿ ಖರ್ಚಾಗುತ್ತೆ..! ಅಜರ್ ಇಷ್ಟೊಂದು ಹಣವನ್ನು ತಮ್ಮ ಜೇಬಿನಿಂದಲೇ ಕೊಡ್ತಾರೆ…! ಯಾರಿಗೂ ವಾಪಸ್ಸು ಕೊಡಿ ಅಂತ ಕೇಳಲ್ಲ..! ಹೀಗೆ 3 ವರ್ಷದಿಂದಲೂ ಒಂದೇ ಒಂದು ದಿನವೂ ಬಿಡದೇ ಊಟ ನೀಡ್ತಾ ಬಂದಿದ್ದಾರೆ..! ಹಸಿದವರ ಪಾಲಿಗೆ ಒಂದರ್ಥದಲ್ಲಿ ಅಜರ್ ದೇವರಾಗಿದ್ದಾರೆ..! ಅಜರ್ಗೆ ಇನ್ನೂ ಹೆಚ್ಚು ಹೆಚ್ಚು ದಾನ ಮಾಡುವಂತ ಶಕ್ತಿಯನ್ನು ಅವರು ನಂಬಿರೋ ದೇವರು ಕರುಣಿಸಲಿ, ಅವರ ಅನ್ನದ ಚರಿಗೆ ಅಕ್ಷಯ ಪಾತ್ರೆಯಂತೆ ತುಂಬುತ್ತಲೇ ಇರಲಿ ಅಂತ ಹರಸೋಣ.

Video :

https://youtu.be/bDwQTKreDro

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಈ ಕನ್ನಡತಿ ಆಟೋ ಓಡಿಸುತ್ತಲೇ ಐಎಎಸ್ ಗೆ ತಯಾರಿ ನಡೆಸುತ್ತಿದ್ದಾರೆ..!

ಈತ ಬರೋಬ್ಬರಿ 800ಕ್ಕೂ ಹೆಚ್ಚು ಮಕ್ಕಳ ತಂದೆ..! ಈತನ ದಾಖಲೆ ಕಂಡು ಕೌರವರೇ ಬೆಚ್ಚಿಬಿದ್ದರು..!

ಭಪ್ಪರೆ ಬಾಸ್..! ತಲೆ ನೋವಿಗೆ ವಯಾಗ್ರಾ ಮಾತ್ರೆ ಕೊಟ್ನಂತೆ..! ಬಾಸ್ ಹುಚ್ಚಾಟಕ್ಕೆ ಕೆರಳಿ ಕಂಪ್ಲೇಂಟ್ ಕೊಟ್ಟ ಹೆಣ್ಣು..!

ಐಎಎಸ್ ಅಧಿಕಾರಿ ಏಕೆ ಕೆಲಸ ಬಿಟ್ಟರು ಗೊತ್ತಾ..? ಐಎಎಸ್ ಕೆಲಸ ಬಿಡುವಂತೆ ಮಾಡಿದ ಕೆಲಸ ಯಾವುದು..?

ಭಾರತದಲ್ಲಿ ಮದುವೆಯ ಬಂಧಕ್ಕೆ ಬೆಲೆ ಇಲ್ಲದಂತಾಗುತ್ತಿದೆಯೇ..?

ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!

ಅಂದು ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಿತ್ತು..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...